ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಅಲ್ಲಿನ ಜನರ ಜೀವನವು ಸಂಕಷ್ಟದಿಂದ ನರಳಿದೆ. ನೆರೆಹಾವಳಿಯಿಂದ ಜನರು ಬದುಕು ಕೂಡಾ ತತ್ತರಿಸಿ ಹೋಗಿದೆ. ನಿರಾಶ್ರಿತರಾದ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಅಲ್ಲಿ ಉದ್ಭವವಾಗಿದೆ. ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ನೀಡಲು, ಅವರಿಗೆ ಧೈರ್ಯ ತುಂಬಲು ಇಡೀ ಕರ್ನಾಟಕ ರಾಜ್ಯದ ಜನರು ಮುಂದಾಗಿದ್ದಾರೆ. ಅಲ್ಲಿಗೆ ಬೇಕಾದಂತಹ ಅಗತ್ಯ ವಸ್ತುಗಳನ್ನು ವಿವಿಧ ಸಂಘಟನೆಗಳು, ಸಂಸ್ಥೆಗಳು ಹಾಗೂ ಸ್ವಯಂ ಸೇವಕರು ಸೇರಿ ಪೂರೈಕೆ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗವು ಕೂಡಾ ಸಂತ್ರಸ್ತರ ನೆರವಿಗೆ ಕೈ ಜೋಡಿಸಿದ್ದು, ನಾಡಿನ ಖ್ಯಾತ ಕಲಾವಿದರು ಉತ್ತರ ಕರ್ನಾಟಕ ಜನರ ನೆರವಿಗೆ ಹೊರಟಿದ್ದಾರೆ. ಆ ನಿಟ್ಟಿನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಉತ್ತರ ಕರ್ನಾಟಕ ಜನರಿಗೆ ಸಹಾಯವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಆ ಸಂದರ್ಭದಲ್ಲಿ ಸುಮಾರು 70 ಜನ ಅಂಧ ಮಕ್ಕಳು ಇದ್ದ ವಸತಿ ಶಾಲೆಯೊಂದು ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿರುವುದು ತಿಳಿದ ಕೂಡಲೇ ಯಶೋಮಾರ್ಗ ಅಲ್ಲಿಗೆ ಹೋಗಿ, ಮಕ್ಕಳನ್ನು ರಕ್ಷಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಆ ಮಕ್ಕಳನ್ನು ರಕ್ಷಿಸಿ ಆಶ್ರಯ ನೀಡಿದ ಯಶೋ ಮಾರ್ಗ ಸಂಸ್ಥೆಯು ಮಕ್ಕಳಿಗೆ ಅಗತ್ಯವಾದಂತಹ ವಸ್ತುಗಳನ್ನು ಪೂರೈಸಿದ್ದಾರೆ. ಅವರಿಗೆ ಜಾಕೆಟ್, ಊಟ, ತಿಂಡಿ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಜನರಿಗೂ ಆಶ್ರಯ ಕಲ್ಪಿಸಿಕೊಟ್ಟಿರುವ ಯಶೋ ಮಾರ್ಗ ಜನರ ನೆರವಿಗೆ ನಿಂತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಬರ ಪರಿಸ್ಥಿತಿ ಉಂಟಾಗಿ ನೀರಿಗೆ ಸಮಸ್ಯೆ ಆದಾಗಲೂ ಕೂಡಾ ಯಶೋ ಮಾರ್ಗ ಸಂಸ್ಥೆ ಹಳ್ಳಿಗಳಲ್ಲಿ ನೀರು ಸರಬರಾಜು ಮಾಡುವ ಕೆಲಸವನ್ನು ಕೂಡಾ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here