Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹುಲಿ ದಾಳಿಗೆ ಬಲಿಯಾದ 9 ವರ್ಷದ ಬಾಲಕ

ಮೈಸೂರು: 9 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ‌ ಎಚ್.ಡಿ.ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಕೃಷ್ಣ ನಾಯಕ್ ಮತ್ತು ಮಹಾದೇವಿಬಾಯಿ ದಂಪತಿ ಪುತ್ರ ಚರಣ್‌ ನಾಯಕ್‌. ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕ ಹುಲಿಯ ಬಾಯಿಗೆ ಬಲಿಯಾಗಿದ್ದಾನೆ.

ಸೋಮವಾರ ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ನೀಡಿದ ಹಿನ್ನಲೆ ಚರಣ್ ಜಮೀನಿನಲ್ಲಿದ್ದ ತಂದೆ-ತಾಯಿ ಬಳಿಗೆ ಹೋಗಿದ್ದ, ಬಿಸಿಲು ಇದ್ದದ್ದರಿಂದ ಮಗನನ್ನು ಮರದ ನೆರಳಲ್ಲಿ ಕೂರುವಂತೆ ಹೇಳಿ ಹೊಲದಲ್ಲಿ ಕೊಯ್ಲು ಮಾಡುತ್ತಿದ್ದರು.

ಈ ವೇಳೆ ಹುಲಿ ಬಾಲಕ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮಗ ಇಲ್ಲದನ್ನುಗಮನಿಸಿದ ಪೋಷಕರು ಹುಡುಕಾಡಿದಾಗ ರಕ್ತದ ಮಡುವಿನಲ್ಲಿ ಮಗನ ದೇಹ ಇರುವುದು ಕಂಡುಬಂದಿದೆ.