Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹೊನ್ನಾವರದಲ್ಲಿ ಕುಖ್ಯಾತ ಬೈಕ್ ಕಳ್ಳರ ಬಂಧನ, 8.5 ಲಕ್ಷದ 15 ಬೈಕ್ ವಶಕ್ಕೆ..!

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಅಂತರ ಜಿಲ್ಲಾ ಮೋಟಾರು ಬೈಕ್ ಕಳ್ಳರ ಜಾಲವನ್ನು ಭೇದಿಸಿದ್ದಾರೆ.

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಅಂತರ ಜಿಲ್ಲಾ ಮೋಟಾರು ಬೈಕ್ ಕಳ್ಳರ ಜಾಲವನ್ನು ಭೇದಿಸಿದ್ದಾರೆ.

ಮುರುಢೇಶ್ವರ, ಹೊನ್ನಾವರ, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಗೈದ ಮೋಟಾರು ಬೈಕ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೋಟಾರು ಬೈಕ್ ಕಳವು ಪ್ರಕರಣದಲ್ಲಿ 8,35,000/- ರೂ ಮೌಲ್ಯದ ಒಟ್ಟು 15 ಮೋಟಾರು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ರವಿಚಂದ್ರ ತಳವಾರ, ಕಲಘಟಗಿಯ ಬಾಷಾ ಸಾಬ್ ಗಂಜಿಗಟ್ಟಿ, ಜಗದೀಶ್ ಬಂಡಿವಾಡ, ಸಲ್ಮಾನ್ ತಹಸಿಲ್ದಾರ ಬಂಧಿತ ಆರೋಪಿಗಳಾಗಿದ್ದಾರೆ.

ಆಗಸ್ಟ್ 31 ರಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕಪ್ಪು ಬಣ್ಣದ ಟಿ.ವಿ.ಎಸ್ ರೈಡರ್ ಮೋಟಾರ್ ಸೈಕಲನ್ನು ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ಬಂದವರನ್ನು ಅಡ್ಡಗಟ್ಟಿ ನಿಲ್ಲಿಸಿ ವಿಚಾರಿಸಿದ್ದಾರೆ.

ಸರ್ಮಪಕವಾದ ಉತ್ತರ ನೀಡದೆ ಇರುವುದರಿಂದ ಠಾಣೆಗೆ ಸಾಗಿಸಿ ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಮೋಟರ್ ಸೈಕಲ್ ಕಳವು ಪ್ರಕರಣ ಬಯಲಿಗೆ ಬಂದಿದೆ.

ವಿವಿಧ ಜಿಲ್ಲೆಗಳಲ್ಲಿ ಸುಮಾರು 14 ಮೋಟಾರ್ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಇದರಲ್ಲಿ ಅಂಕೋಲಾ ಪೊಲೀಸ್ ಠಾಣೆಯ 01, ಮುರುಡೆಶ್ವರ ಪೊಲೀಸ್ ಠಾಣೆ 01 ಹಾಗೂ ಮಂಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿನ 01 ಮೋಟಾರು ಸೈಕಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್‌ನ್ನು ಹಾಗೂ ಸದ್ರಿಯವರು ಕಳ್ಳತನಮಾಡಿದ ಎಲ್ಲಾ ಮೋಟಾರ ಸೈಕಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ 8.35 ಲಕ್ಷವಾಗಿದೆ ಮಂಕಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.ಪ್ರಕರಣ ಭೇದಿಸಿದ ಅಧಿಕಾರಿಗಳನ್ನು ಉತ್ತರ ಕನ್ನಡ ಎಸ್‌ಪಿ ವಿಷ್ಣುವರ್ಧನ್ ಅವರು ಪ್ರಶಂಸಿದ್ದಾರೆ.