Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

NMPA ಗೆ ಭೇಟಿ ನೀಡಿದ ಭಾರತ ಸರ್ಕಾರದ ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ..!

ಭಾರತ ಸರ್ಕಾರದ ಉಕ್ಕು ಸಚಿವಲಯದ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ ಶುಕ್ರವಾರ ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ನವ ಮಂಗಳೂರು ಬಂದರು ಪ್ರಾಧಿಕಾರ(NMPA) ಕ್ಕೆ ಭೇಟಿ ನೀಡಿ ಬಂದರಿನ ಕಾರ್ಯಚಟುವಟಿಕೆಗಳ ಬಗ್ಗೆ ಪರಾಮರ್ಶೆ ನಡೆಸಿದರು.

ಮಂಗಳೂರು : ಭಾರತ ಸರ್ಕಾರದ ಉಕ್ಕು ಸಚಿವಲಯದ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ ಶುಕ್ರವಾರ ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿ ಬಂದರಿನ ಕಾರ್ಯಚಟುವಟಿಕೆಗಳ ಬಗ್ಗೆ ಪರಾಮರ್ಶೆ ನಡೆಸಿದರು.

ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎ.ವಿ. ರಮಣ ಅವರು ಗಣ್ಯರನ್ನು ಬಂದರಿಗೆ ಸ್ವಾಗತಿಸಿದರು,

ಎನ್ ಎಂಪಿಎ ಉಪಾಧ್ಯಕ್ಷರಾದ ಕೆ.ಜಿ.ನಾಥ್ ಮತ್ತು ಎನ್‌ಎಂಪಿಎ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕ್ರೂಸ್ ಟರ್ಮಿನಲ್‌ಗೂ ಭೇಟಿ ನೀಡಿದ ನಾಗೇಂದ್ರನಾಥ್ ಸಿನ್ಹಾ ಬಂದರಿನ ವಿವಿಧ ಮೂಲಸೌಕರ್ಯ ಅಂಶಗಳ ಕುರಿತು ಬಂದರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬಳಿಕ KIOCL ನಿರ್ವಹಿಸುವ ಕಬ್ಬಿಣದ ಅದಿರು / ಕಚ್ಚಾ ವಸ್ತುಗಳ ಆಮದು ಮತ್ತು ರಫ್ತು ಕಬ್ಬಿಣದ ಅದಿರು ಉಂಡೆಗಳ ನಿರ್ವಹಣೆ ಸೌಲಭ್ಯಗಳನ್ನು ಪರಿಶೀಲಿಸಿ ಬಂದರು ಪ್ರಾಧಿಕಾರ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು.

KIOCL ಸಿಎಂಡಿ ಟಿ. ಸಾಮಿನಾಥನ್ , ಕೆಐಒಸಿಎಲ್‌ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಎನ್‌ ಎಂಪಿಎ ಅಧ್ಯಕ್ಷರು ಬಂದರಿನ ಭವಿಷ್ಯದ ಯೋಜನೆಗಳು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಕೈಗೊಂಡ ಉಪಕ್ರಮಗಳು, ಹಸಿರು ಬಂದರು ಉಪಕ್ರಮಗಳು ಇತ್ಯಾದಿ. ಭವಿಷ್ಯದ ವಿಸ್ತರಣಾ ಕಾರ್ಯಕ್ರಮಗಳು, ಮೂಲಸೌಕರ್ಯ ಯೋಜನೆಗಳು ಮತ್ತು ಇತರ ಪ್ರಸ್ತಾವನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಇದರ ನಂತರ ಅವರು ಬಂದರಿನ ಬರ್ತ್‌ಗಳು ಮತ್ತು ವಿವಿಧ ಮೂಲಸೌಕರ್ಯ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡಿದರು.

ಇದೇ ಸಮಯ ಈ ಪ್ರದೇಶದಲ್ಲಿ ಈವೆಂಟ್‌ನ ವ್ಯಾಪಕ ಪ್ರಚಾರಕ್ಕಾಗಿ ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2023 ಲೋಗೋ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದರು ಮತ್ತು ಶೃಂಗಸಭೆಯು ಭವ್ಯವಾದ ಯಶಸ್ಸನ್ನು ಹೊಂದಲಿ ಎಂದು ಶುಭ ಹಾರೈಸಿದರು.

ನವಮಂಗಳೂರು ಬಂದರು ಪ್ರಾಧಿಕಾರದ ಕಾರ್ಯಕ್ರಮಗಳು ಮತ್ತು ಪರಿಸರ ಸಹ್ಯ ಯೋಜನೆಗಳನ್ನು ಕಾರ್ಯಗತಗೊಳಿಸಿದಕ್ಕೆ ಕಾರ್ಯದರ್ಶಿಗಳು ಸಂತಸ ವ್ಯಕ್ತಪಡಿಸಿದರು.