Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿನ್ನದ ಗಣಿ ಕುಸಿತ – 6 ಮಂದಿ ಮೃತ್ಯು, 15 ಜನರು ನಾಪತ್ತೆ

ಹರಾರೆ: ಜಿಂಬಾಬ್ವೆಯ ಬೇ ಹಾರ್ಸ್ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ವೇಳೆ ಗಣಿ ಕುಸಿದು 6 ಮಂದಿ ಮೃತಪಟ್ಟು 15 ಜನರು ಸಿಲುಕಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದ್ದು ಇನ್ನೂ 15 ಗಣಿಗಾರರು ನಾಪತ್ತೆಯಾಗಿದ್ದು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಇನ್ನು ಶುಕ್ರವಾರದಂದು ಗಣಿಯಲ್ಲಿ ಸುಮಾರು 34 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಕುಸಿತವಾಗಿದೆ ಈ ವೇಳೆ ಹದಿಮೂರು ಮಂದಿ ಪಾರಾಗಿದ್ದು ಇಪ್ಪತ್ತೊಂದು ಮಂದಿ ಗಣಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ ಬಳಿಕ ರಕ್ಷಣಾ ತಂಡದ ಸತತ ಪ್ರಯತ್ನದ ಮೂಲಕ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಇನ್ನೂ ಹದಿನೈದು ಮಂದಿ ನಾಪತ್ತೆಯಾಗಿದ್ದಾರೆ.