Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

17ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್‌, ಹಮಾಸ್‌ ಯುದ್ಧ- ಇಸ್ರೇಲಿ ವೈಮಾನಿಕ ದಾಳಿಗೆ 266 ಮಂದಿ ಸಾವು

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ಇಂದು 17ನೇ ದಿನಕ್ಕೆ ಕಾಲಿಟ್ಟಿದ್ದು ಯುದ್ದ ಮುಂದುವರಿದ್ದು, ದಿನದಿಂದ ದಿನಕ್ಕೆ ಸಂಘರ್ಷದ ಕಿಚ್ಚು ಭಯನಕವಾಗಿದೆ.

ಅ.23 ರಂದು ನಡೆದ ಇಸ್ರೇಲಿ ವೈಮಾನಿಕ ದಾಳಿಗೆ ಗಾಜಾದ ಕಟ್ಟಡಗಳನ್ನು ಧ್ವಂಸಗೊಂಡು ಸುಮಾರು 30 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಅಲ್ಲದೇ ಇಸ್ರೇಲಿ ಸೇನೆ ಗಾಜಾ ಪಟ್ಟಿಯಲ್ಲಿರುವ ಅಲ್-ಶುಹಾದಾ ಪ್ರದೇಶದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಕೂಡ ದಾಳಿ ನಡೆಸಿದೆ ಎನ್ನಲಾಗಿದೆ.

ಕಳೆದ 24 ಗಂಟೆಗಳಲ್ಲಿ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ಟೀನಿಯನ್ನರು ಜೀವ ಕಳೆದುಕೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದಾರೆ.ಇಸ್ರೇಲಿನ ಬಾಂಬ್ ದಾಳಿಗೆ ಗಾಜಾ ಪಟ್ಟಿಯಲ್ಲಿ ಇದುವರೆಗೆ 4,600 ಜನರು ಬಲಿಯಾಗಿದ್ದಾರೆ. ಇನ್ನು ಹಮಾಸ್‌ ದಾಳಿಗೆ 1,400 ಇಸ್ರೇಲಿ ನಾಗರಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಇದೀಗ ವಿಶ್ವಕ್ಕೆ ಆತಂಕವನ್ನು ಸೃಷ್ಟಿಸಿದೆ. ಇದರ ಮಧ್ಯೆ ಹಿಜಬುಲ್ಲಾ ಯುದ್ದಕ್ಕೆ ಬೆಂಬಲಿಸಿದರೆ ಅದು ಲೆಬನಾನ್‌ನಲ್ಲಿ ಎರಡನೇ ಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.