Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

11 ಅನ್‌ಲೈನ್‌ ಗೇಮಿಂಗ್ ಕಂಪನಿ ತೆರಿಗೆ ವಂಚನೆ- ಶೋಕಾಸ್ ನೋಟಿಸ್ ಜಾರಿ

ನವದೆಹಲಿ:ತೆರಿಗೆ ವಂಚನೆ ಮಾಡಿರುವ ಅನ್‌ಲೈನ್‌ ಗೇಮಿಂಗ್ ಕಂಪನಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಶೋಕಾಸ್ ನೋಟಿಸ್‌ನ್ನು ಜಿಎಸ್ಟಿ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಡ್ರೀಮ್11 ನಂತಹ ಆನ್ಲೈನ್ ಗೇಮಿಂಗ್ ಕಂಪನಿಗಳು, ಡೆಲ್ಟಾ ಕಾರ್ಟ್ ಇತ್ಯಾದಿ ಕ್ಯಾಸಿನೋ ಆಪರೇಟಿಂಗ್ ಕಂಪನಿಗಳಿಗೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ಟಿ ಇಲಾಖೆಯಿಂದ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ .

ಅಲ್ಲದೇ ಅಕ್ಟೋಬರ್ 1 ರಿಂದ ವಿದೇಶಿ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೋಂದಾಯಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರಸರ್ಕಾರ ಜಿಎಸ್ಟಿ ಕಾನೂನಿಗೆ ತಿದ್ದುಪಡಿ ತಂದಿದ್ದು, ವಿದೇಶಿ ಅನ್‌ಲೈನ್‌ ಗೇಮಿಂಗ್ ಕಂಪನಿಗಳು ಅಕ್ಟೋಬರ್ 1 ರಿಂದ ಭಾರತದಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಅನ್‌ಲೈನ್‌ ಗೇಮಿಂಗ್ ಪ್ಲಾಟ್‌ ಫಾರ್ಮ್‌‌ಗಳಿಗೆ ಶೇಕಡಾ 28 ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗುವುದು ಎಂದು ಜಿಎಸ್ಟಿ ಕೌನ್ಸಿಲ್ ಕಳೆದ ಆಗಸ್ಟ್‌ನಲ್ಲಿ ಸ್ಪಷ್ಟಪಡಿಸಿತ್ತು.