Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

18 ಜನರನ್ನು ಹತ್ಯೆಗೈದ ಶಂಕಿತ ಹಂತಕನ ಮೃತದೇಹ ಪತ್ತೆ

ಅಮೆರಿಕಾ: ಅಮೆರಿಕಾದ ಮೈನೆ ರಾಜ್ಯದ ಲೆವಿಸ್ಟನ್‌ನಲ್ಲಿ ನಗರದ ರೆಸ್ಟೋರೆಂಟ್‌ ಮತ್ತು ‘ಬೌಲಿಂಗ್‌ ಅಲೈ’ ಕೇಂದ್ರದ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದ 18 ಜನರನ್ನು ಹತ್ಯೆಗೈದಿದ್ದ ಬಂದೂಕುಧಾರಿ ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.

ರಾಬರ್ಟ್ ಕಾರ್ಡ್(40) ಆರ್ಮಿ ರಿಸರ್ವಿಸ್ಟ್ ಆಗಿದ್ದ ಈತ ಸ್ವಯಂ-ಉಚಿತ ಗುಂಡೇಟಿನಿಂದ ಸಾವನ್ನಪ್ಪಿದ್ದು ಆತನ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ. ಮೃತದೇಹವು ಲೆವಿಸ್ಟನ್‌ ನಗರದಿಂದ 8 ಕಿ.ಮೀ ದೂರದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್‌ ನಗರದ ‘ಬೌಲಿಂಗ್‌ ಅಲೈ’ ಮತ್ತು ರೆಸ್ಟೋರೆಂಟ್‌ ಕೇಂದ್ರಕ್ಕೆ ನುಗ್ಗಿದ್ದ ಈತ ಲೇಸರ್ ಆಪ್ಟಿಕ್‌ನೊಂದಿಗೆ AR 15-ಶೈಲಿಯ ರೈಫಲ್‌ನೊಂದಿಗೆ ಶಸ್ತ್ರಸಜ್ಜಿತ ರಾಬರ್ಟ್‌ ಕಾರ್ಡ್ ಮನಸೋಇಚ್ಚೆ ದಾಳಿ ನಡೆಸಿ ಹದಿನೆಂಟು ಮಂದಿಯನ್ನು ಹತ್ಯೆಗೈದಿದ್ದ. ಗುಂಡೇಟಿನಿಂದ ಅರುವತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಬರ್ಟ್‌ ಕಾರ್ಡ್ ಹಿಂದೆ ಅಮೆರಿಕಾದ ಮಿಲಿಟರಿಯಲ್ಲಿ ತರಬೇತಿ ಪಡೆದಿದ್ದು ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗೂ ಒಳಗಾಗಿದ್ದ ಎನ್ನಲಾಗಿದೆ.ಘಟನೆ ಬಳಿಕ ಲೆವಿಸ್ಟನ್‌ ಪೊಲೀಸರು ಕಾರ್ಡ್ ಪತ್ತೆಗೆ ಹಲವು ತಂಡ ರಚಿಸಿದ್ದರು ಆದರೆ ಕಾರ್ಡ್ ಎರಡು ದಿನಗಳ ಬಳಿಕ ಲೆವಿಸ್ಟನ್‌ ನಲ್ಲಿರುವ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ.