Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೀಪಾವಳಿ: ರಾತ್ರಿ 8 ರಿಂದ 10 ರವರೆಗೆ ಪಟಾಕಿಗೆ ಅವಕಾಶ- ಸರ್ಕಾರದಿಂದ ಮಾರ್ಗಸೂಚಿ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದ್ದು, ದಿನಕ್ಕೆ 2 ಗಂಟೆ ಮಾತ್ರ ಸುಡುಮದ್ದು ಸಿಡಿಸಲು ಅವಕಾಶ ನೀಡಲಾಗಿದೆ.ರಾಜ್ಯಾದ್ಯಂತ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಸುಡುಮದ್ದು ಸಿಡಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಅದರಂತೆಯೇ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದ ಆದೇಶದ ಅನುಸಾರ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದ್ದು ಉಳಿದ ಅವಧಿಯಲ್ಲಿ ನಿಷೇಧ ಹೇರಲಾಗಿದೆ.

ಹಬ್ಬ ದ ಆಚರಣೆ ವೇಳೆ ನಿಗದಿತ ಗುಣ ಮಾಪನಗಳಿಗೆ ಸರಿಹೊಂದುವ ಹಸಿರು ಪಟಾಕಿಗಳನ್ನು ಮಾತ್ರ
ಬಳಸಬೇಕು. ಯಾವುದೇ ಪ್ರಾಣಿ-ಪಕ್ಷಿ , ಮಕ್ಕಳು, ವೃದ್ಧ ರಿಗೆ ತೊಂದರೆಯಾಗದಂತೆ ಗಮನಿಸಬೇಕು. ಆಸ್ಪ ತ್ರೆ , ಶಿಕ್ಷಣ ಸಂಸ್ಥೆ , ನಿಷೇಧಿತ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ಹೇಳಲಾಗಿದೆ