Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾಡೆಲಿಂಗ್ ತ್ಯಜಿಸಿ ಐಎಎಸ್ ಅಧಿಕಾರಿಯಾದ ತಸ್ಕೀನ್ ಖಾನ್

ಡೆಹ್ರಡೂನ್: ನಾಗರಿಕ ಸೇವಾ ಪರೀಕ್ಷೆಯು ಯುಪಿಎಸ್‌ಸಿ ನಡೆಸುವ ಭಾರತದಲ್ಲಿನ ಪ್ರತಿಷ್ಠಿತ ಮತ್ತು ಹೆಚ್ಚು ಕಷ್ಟಕರವಾದ ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳಲ್ಲಿ ಒಂದಾಗಿದೆ. ಕಠಿಣ ಪರಿಶ್ರಮ ಮತ್ತು ಶೃದ್ದೆ ಇದ್ದರೆ ಬುದ್ದಿವಂತರಲ್ಲ, ಸಾಮಾನ್ಯ ವಿದ್ಯಾರ್ಥಿಯಾಗಿದ್ದ ವ್ಯಕ್ತಿ ಕೂಡಾ ಈ ಪರೀಕ್ಷೆಯನ್ನು ಜಯಿಸಬಹು ಎಂಬುವುದಕ್ಕೆ ಉದಾಹರಣೆ ಡೆಹ್ರಾಡೂನ್ ಮೂಲದ ಐಎಎಸ್ ಅಧಿಕಾರಿ ತಸ್ಕೀನ್ ಖಾನ್.

ಫ್ಯಾಷನ್ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಬೇಕೆಂದು ಹೊರಟಿದ್ದ ತಸ್ಕೀನ್ ಖಾನ್ ಹಾದಿಯನ್ನು ಬದಲಾಯಿಸಿ ಯುಪಿಎಸ್‌ಸಿ ಎದುರಿಸಿ ಸಾಧನೆಯ ಶಿಖರವೇರಿದರು. ಶಾಲಾ ದಿನಗಳಲ್ಲಿ ಕಲಿಕೆಯನ್ನು ಹೊರತುಪಡಿಸಿ, ಇತರೆ ಪಠ್ಯೇತರ ಸದಾ ಮುಂದಿದ್ದರು. ತಸ್ಕೀನ್ ತಮ್ಮ ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದು ಮಾಡಲಿಂಗ್ ಜಗತ್ತನ್ನು ಪ್ರವೇಶಿಸುವ ಮೂಲಕ ಮಿಸ್ ಡೆಹ್ರಾಡೂನ್ ಮತ್ತು ಮಿಸ್ ಉತ್ತರಾಖಂಡ್ ಕಿರೀಟವನ್ನು ಅಲಂಕರಿಸಿದರು. ನಂತರ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲಬೇಕೆಂಬ ಆಕಾಂಕ್ಷೆಯಲ್ಲಿದ್ದರು, ಆದರೆ ಆರ್ಥಿಕ ಸಂಕಷ್ಟಗಳು ಆ ಕನಸನ್ನು ನನಸಾಗಿಸುವ ತಡೆಯನ್ನುಂಟು ಮಾಡಿತು. ಆದರೆ, ಕೈಲಾಗದು ಎಂದು ಕೊರಗಿ ಕುಳಿತುಕೊಳ್ಳಲಿಲ್ಲ. ಮಾಡೆಲಿಂಗ್ ಕಡೆಯಿಂದ ತಮ್ಮ ಆಸಕ್ತಿಯನ್ನು ಯುಪಿಎಸ್‌ಸಿಯತ್ತ ಹೊರಳಿಸಿದರು.

ಅಧ್ಯಯನದತ್ತ ಮುಖಮಾಡಿದ ಇವರು ತಮ್ಮೆಲ್ಲ ಶ್ರಮವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಗೆ ಮೀಸಲಿಟ್ಟರು. ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಪರೀಕ್ಷೆ ಬರೆಯಲು ಮುಂದಾದರು.

ತಸ್ಕೀನ್ ಖಾನ್ ಮೂರು ಬಾರಿ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗಿದ್ದರು. ಮೂರು ಬಾರಿ ವೈಫಲ್ಯ ಎದುರಿಸಬೇಕಾಯ್ತು. ಇದರಿಂದ ಅವರು ಧೈರ್ಯ ಕಳೆದುಕೊಳ್ಳದೆ. ಕಠಿಣ ಅಧ್ಯಯನವನ್ನು ಮುಂದುವರೆಸಿದರು. 2020 ರಲ್ಲಿ ಅವರ ಶ್ರಮಕ್ಕೆ ಫಲ ದೊರೆತು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಸಫಲರಾದರು.

ಆರ್ಥಿಕ ಅಡೆತಡೆಗಳನ್ನು ಮೆಟ್ಟಿನಿಂತು ತಸ್ಕೀನ್ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡು ಲಕ್ಷಾಂತರ UPSC ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.