Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಗಳೂರು-ಬೆಂಗಳೂರು ನಡುವೆ ಎರಡು ಹೊಸ ವಿಮಾನ ಬುಧವಾರದಿಂದ ಕಾರ್ಯಾರಂಭ

ಮಂಗಳೂರು : ಮಂಗಳೂರು-ಬೆಂಗಳೂರು ಮಧ್ಯೆ ಬುಧವಾರದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ ಎರಡು ಹೊಸ ವಿಮಾನಗಳು ಸಂಚರಿಸಲಿವೆ. ಹೊಸ ವಿಮಾನಗಳು ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೂ ಸಂಪರ್ಕ ಕಲ್ಪಿಸಲಿವೆ.ಫ್ಲೈಟ್ ಕ್ಯಾರಿಯರ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX 782 ವಾರಣಾಸಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು, 10.30ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ತಲುಪುತ್ತದೆ. ಅಲ್ಲಿಂದ ಬೆಳಗ್ಗೆ 11.10 ಕ್ಕೆ ಹೊರಡುತ್ತದೆ ಮತ್ತು 12.10 ಕ್ಕೆ ಮಂಗಳೂರು ತಲುಪುತ್ತದೆ.ವಾರಣಾಸಿ ಮತ್ತು ಮಂಗಳೂರಿಗೆ ನವೆಂಬರ್ 25ರವರೆಗೆ ಕೇವಲ 10 ದಿನಗಳ ಕಾಲ ಮಾತ್ರ ಸಂಪರ್ಕ ಕಲ್ಪಿಸಲಾಗುವುದು. ನವೆಂಬರ್ 26ರಿಂದ ಇದೇ ವಿಮಾನವು ಚೆನ್ನೈನಿಂದ-ಮಂಗಳೂರಿಗೆ ಬೆಂಗಳೂರು ಮಾರ್ಗವಾಗಿ ಮೂಲಕ ಸಂಪರ್ಕ ಕಲ್ಪಿಸಲಿದೆ. ಇದು ಬೆಳಗ್ಗೆ 9.35ಕ್ಕೆ ಚೆನ್ನೈನಿಂದ ಹೊರಡುತ್ತದೆ, 10.35ಕ್ಕೆ ಬೆಂಗಳೂರಿಗೆ ತಲುಪುತ್ತದೆ. 12.10ಕ್ಕೆ ಮಂಗಳೂರಿಗೆ ತಲುಪುತ್ತದೆ. ಫ್ಲೈಟ್ ನಂಬರ್​ IX 678 ಮಂಗಳೂರಿನಿಂದ ಮಧ್ಯಾಹ್ನ 12.40ಕ್ಕೆ ಹೊರಟು ಬೆಂಗಳೂರಿಗೆ 1.5 ಕ್ಕೆ ತಲುಪುತ್ತದೆ.ಎರಡನೇ ಹೊಸ ವಿಮಾನವು ಕಣ್ಣೂರು-ಬೆಂಗಳೂರು-ಮಂಗಳೂರು (IX 1795) ನಡುವೆ ಸಂಚರಿಸುತ್ತದೆ. ಇದು ಬುಧವಾರದಿಂದ ಕಾರ್ಯನಿರ್ವಹಿಸಲಿದೆ. ಇದು ಕಣ್ಣೂರಿನಿಂದ ಸಂಜೆ 4.30ಕ್ಕೆ ಹೊರಟು 5.50ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ನಂತರ 6.25ಕ್ಕೆ ಹೊರಟು 7.35ಕ್ಕೆ ಮಂಗಳೂರು ತಲುಪುತ್ತದೆ. ಅದೇ ವಿಮಾನ ಮಂಗಳೂರಿನಿಂದ ರಾತ್ರಿ 8.15ಕ್ಕೆ ಹೊರಟು ರಾತ್ರಿ 9.30ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಮತ್ತು 50 ನಿಮಿಷಗಳ ಲೇಓವರ್ ನಂತರ ತಿರುವನಂತಪುರಂಗೆ ಹೊರಟು ರಾತ್ರಿ 11.25ಕ್ಕೆ ತಲುಪುತ್ತದೆ. ಏರ್‌ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಸ್ತುತ ವಿವರಗಳ ಪ್ರಕಾರ ವಿಮಾನವು ಬೋಯಿಂಗ್ 737 ಮ್ಯಾಕ್ಸ್ ಆಗಿರುತ್ತದೆ.ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪುಣೆ-ಮಂಗಳೂರು ವಿಮಾನ ವಾರಕ್ಕೆ ಮೂರು ಬಾರಿ ನವೆಂಬರ್ 19ರಿಂದ ಪುನರಾರಂಭಗೊಳ್ಳಲಿದೆ. ಸಮಯವೂ ಬದಲಾಗಿದೆ. 6E177 ವಿಮಾನ ಪುಣೆಯಿಂದ ಬೆಳಗ್ಗೆ 7.25ಕ್ಕೆ ಹೊರಡಲಿದ್ದು, ಬೆಳಗ್ಗೆ 9.05ಕ್ಕೆ ಮಂಗಳುರು ತಲುಪಲಿದೆ. 6E358 ವಿಮಾನ ಮಂಗಳೂರಿನಿಂದ ಬೆಳಗ್ಗೆ 10.15ಕ್ಕೆ ಹೊರಟು 11.40ಕ್ಕೆ ಪುಣೆ ತಲುಪಲಿದೆ. ಈ ವಿಮಾನವು 186 ಆಸನಗಳ ಏರ್‌ಬಸ್ A320 ಆಗಿರುತ್ತದೆ.