Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅದೇಷ್ಟೋ ಬಾರಿ ಕ್ಯಾಬ್‌ನಲ್ಲಿ ಮಲಗಿದ್ದೆ: ನಟಿ ದೀಪಿಕಾ ಪಡುಕೋಣೆ.!

 

ಮುಂಬೈ: ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಕೈಯಲ್ಲಿ ಲಗೇಜ್ ಇಟ್ಟುಕೊಂಡು ಮುಂಬೈನಾದ್ಯಂತ ಅಲೆದಾಡಿದ್ದೇನೆ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಮುಂಬೈ ನಗರಕ್ಕೆ ಬಂದೆ. ಆಗ ಸಿನಿಮಾ ರಂಗದಲ್ಲಿ ನನಗೆ ಯಾವುದೇ ಸ್ನೇಹಿತರು/ ಸಂಬಂಧಿಗಳಿರಲಿಲ್ಲ. ಈ ಅವಕಾಶಗಳ ಹುಡುಕಾಟದಲ್ಲಿ ಹಲವು ಬಾರಿ ಮಧ್ಯರಾತ್ರಿ ಆಗಿರುತಿತ್ತು.

ಕೈಯಲ್ಲಿ ಸೂಟ್ ಕೇಸ್ ಹಿಡಿದು ಕ್ಯಾಬ್‌ಗಳಲ್ಲಿ ಓಡಾಡುತ್ತಿದ್ದೆ. ಅದರಲ್ಲೇ ಮಲಗುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ದೀಪಿಕಾ ಮೆಲಕು ಹಾಕಿದ್ದಾರೆ.!