Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಠದಲ್ಲಿ ವಾಸ್ತವ್ಯ-ಬೇಲ್ ಮೇಲಿರೋ ಮುರುಘಾಶ್ರೀ ಮೇಲೆ ಮತ್ತೊಂದು ದೂರು

ಚಿತ್ರದುರ್ಗ: ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ ಇದೀಗ ಮುರುಘಾಶ್ರೀ ವಿರುದ್ಧ ಚಿತ್ರದುರ್ಗದ ಎಸ್‍ಪಿ ಕಚೇರಿಗೆ ವಕೀಲರಾದ ಮಧುಕುಮಾರ್ ಮತ್ತೊಂದು ದೂರು ಸಲ್ಲಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮುರುಘಾಶ್ರೀ ದಾವಣಗೆರೆ ವಿರಕ್ತ ಮಠದಲ್ಲಿ ವಾಸಿಸುತ್ತಿರುವುದು ಸಹ ಅಪರಾಧವಾಗಿದೆ. ಅವರು ವಿಕ್ಟಿಮ್ಸ್ ಗಳ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ಮುರುಘಾಶ್ರೀಗೆ ಮಠದಲ್ಲಿ ವಾಸ್ತವ್ಯ ಹೂಡದಂತೆ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹೈಕೋರ್ಟಿಗೆ ವಕೀಲರಾದ ಮಧುಕುಮಾರ್ ಮನವಿ ಮಾಡಿದ್ದಾರೆ.

ಹಾಗೇ ಮಧುಕುಮಾರ್ ನೀಡಿರುವ ದೂರಿನಲ್ಲಿ ಈ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.

ಇನ್ನು ಮಧುಕುಮಾರ್ ಅವರು ಮುರುಘಾಶ್ರೀ ವಿರುದ್ಧ ಕಾನೂನುಬಾಹಿರ, ಅನಧಿಕೃತವಾಗಿ ಮಕ್ಕಳ ಪಾಲನೆ ಆರೋಪ ಮುರುಘಾಮಠದಲ್ಲಿ ಅಕ್ರಮವಾಗಿ ಆರು ಜನ ಮಕ್ಕಳನ್ನು ಅನಧಿಕೃತವಾಗಿ ಸಾಕಿ, ಅಕ್ರಮ ಹಾಗೂ ಕಾನೂನುಬಾಹಿರವಾಗಿ ದತ್ತು ನೀಡಿದ್ದಾರೆ.

ಮಠದಲ್ಲಿ 2001ರ ಜನವರಿ 5ರಂದು ಸಿಕ್ಕ ಮಗು, 2022ರ ಆಗಸ್ಟ್ 13 ರಂದು ಸಿಕ್ಕ ಹಸುಗೂಸು ಹಾಗೂ 2003ರ ಮೇ 21ರಂದು ಮೂರನೇ ಮಗು ಸೇರಿದಂತೆ ಮತ್ತೆ ಮೂವರು ಮಕ್ಕಳು ಮಠಕ್ಕೆ ಅನಧಿಕೃತವಾಗಿ ಧಾವಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅನಧಿಕೃತವಾಗಿ ಬಂದ ಕೆಲ ಹೆಣ್ಮಕ್ಕಳನ್ನು ಮುರುಘಾಶ್ರೀ ಆಪ್ತ ವಲಯಕ್ಕೆ ಅಕ್ರಮವಾಗಿ ದತ್ತು ನೀಡಿರುವ ವಿವರ ಹಾಗೂ ಎಲ್ಲಾ ಪ್ರಕ್ರಿಯೆ ಬಗ್ಗೆ ಮುರುಘಾಶ್ರೀ ಬರೆದಿರುವ ಅಗ್ನಿಗಾನ ಜೀವನಕಥನದಲ್ಲಿ ಉಲ್ಲೇಖವಾಗಿರುವ ದಾಖಲೆಗಳನ್ನು ಮಧುಕುಮಾರ್ ಸಲ್ಲಿಸಿದ್ದಾರೆ.