Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೈಬರ್ ವಂಚಕರ ಜಾಲಕ್ಕೆ ಬಲಿಯಾಗುತ್ತಿರುವ ವಿದ್ಯಾವಂತರು

ಬೆಂಗಳೂರು: ಕಾಲ ಬದಲಾಗಿದೆ ಇದು ಡಿಜಿಟಲ್ ಯುಗ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸೈಬರ್ ಅಪರಾಧಿಗಳು ಅದೆಷ್ಟೋ ವಿವಿಧ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಇಂತಹದೇ ಮೂರು ಸೈಬರ್ ವಂಚನೆಯ ಘಟನೆಗಳಿವೆ.

ಸೈಬರ್ ಅಪರಾಧಿಗಳು ಬೆಂಗಳೂರು ಮೂಲದ ವೈದ್ಯ ಮತ್ತು ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಕೊರಿಯರ್​ನಲ್ಲಿ ನಿಷೇಧಿತ ವಸ್ತುಗಳು ಬಂದಿವೆ ಎಂದು ಹೇಳಿ ಬ್ಯಾಂಕ್ ಖಾತೆ ಡಿಡೈಲ್ಸ್ ಪಡೆದು ಬ್ಯಾಂಕ್ ಖಾತೆಗಳಿಂದ ಒಟ್ಟು 63 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.

ಕೋರಮಂಗಲದ ನಿವಾಸಿಯಾಗಿರುವ ವೈದ್ಯೆಗೆ ಕೊರಿಯರ್ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿದ್ದು, ತನ್ನ ಹೆಸರಿನಲ್ಲಿ ನಿಷೇಧಿತ ವಸ್ತುಗಳ ಪಾರ್ಸೆಲ್ ಇದೆ ಎಂದು ತಿಳಿಸಿದ್ದಾರೆ. ಬಳಿಕ ಅಪ್ಲಿಕೇಶನ್​ವೊಂದನ್ನು ಡೌನ್‌ಲೋಡ್ ಮಾಡಲು ಹೇಳಿದರು. ಆಘಾತಕ್ಕೊಳಗಾದ ಅವರು, ಕರೆ ಮಾಡಿದ ಆರೋಪವನ್ನು ನಿರಾಕರಿಸಲು ಪ್ರಯತ್ನಿಸಿದರು. ಈ ವೇಳೆ ಸೈಬರ್ ವಂಚಕರು ಆಕೆಯ ಬ್ಯಾಂಕ್ ಖಾತೆಗಳನ್ನು ಕ್ರಾಸ್ ಚೆಕ್ ಮಾಡುವ ನೆಪದಲ್ಲಿ ವಿವರಗಳನ್ನು ಪಡೆದುಕೊಂಡು 7.6 ಲಕ್ಷ ವರ್ಗಾಯಿಸಿದ್ದಾರೆ. ತನ್ನ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಮೆಸೇಜ್ ಬಂದಾಕ್ಷಣವೇ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ವೇಳೆ ತಾನು ವಂಚಕರ ವಂಚನೆಯ ಬಲೆಗೆ ಬಿದ್ದಿರುವುದು ಅವರಿಗೆ ತಿಳಿದುಬಂದಿದೆ.

ಬೇಗೂರಿನ 48 ವರ್ಷದ ವ್ಯಕ್ತಿಯೊಬ್ಬರಿಗೆ ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ತನ್ನ ಖಾತೆಯ ಡಿಟೈಲ್ಸ್ ಪಡೆದು 29.6 ಲಕ್ಷ ರೂ. ವಂಚಿಸಿದ್ದಾಗಿ ದೂರು ನೀಡಿದ್ದಾರೆ. ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್‌ಗೆ ಪಾರ್ಸೆಲ್ ಇದ್ದು ಅದರಲ್ಲಿ ನಿಷೇಧಿತ ವಸ್ತುಗಳು ಇರುವುದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾನೆ. ಅಲ್ಲದೆ, ತನ್ನ ಆಧಾರ್ ವಿವರಗಳನ್ನು ಶಂಕಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪರಿಶೀಲನೆಗಾಗಿ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದು, ಈ ವ್ಯಕ್ತಿ ವಿವರಗಳನ್ನು ನೀಡಿದ್ದಾರೆ. ಬ್ಯಾಂಕ್ ಖಾತೆ ಡಿಟೈಲ್ಸ್ ಸಿಕ್ಕ ಕೂಡಲೇ ಬ್ಯಾಂಕ್ ಖಾತೆಯಲ್ಲಿದ್ದ ಉಳಿತಾದಯ ಹಣವೆಲ್ಲಾ ಖಾಲೆಯಾಗಿ ವಂಚಕರ ಖಾತೆ ತುಂಬಿದೆ. ಈ ಹಿಂದೆ ದೇವರಬೀಸನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಕೂಡ ಇದೇ ಮಾದರಿಯಲ್ಲಿ ವಂಚನೆಗೊಳಗಾಗಿದ್ದರು.

ಪಾರ್ಸೆಲ್ ಗಳು ಅಥವಾ ಇತರ ಪಾರ್ಸೆಲ್ ಆರೋಪ ಇಂತಹ ಕರೆಗಳು ಬಂದಾಗ ಜನರು ಭಯಪಡುತ್ತಾರೆ ಆದರೆ ಇಂತಹಾ ವಂಚನೆಯ ಕರೆಗಳು ಬಂದಾಗ ಯೋಚಿಸಬೇಕಾಗುತ್ತದೆ. ಯಾವುದೇ ವಯಕ್ತಿಯ ವಿವರಗಳನ್ನು ಪಡೆಯಲು ಯಾರಿಗೂ ಅಧಿಕಾರವಿಲ್ಲ ಅದೂ ಫೋನಿನ ಮೂಲಕ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.