Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಗಳೂರು : ಡೆತ್ ಸರ್ಟಿಫಿಕೇಟ್ ಗೆ 13 ಸಾವಿರಾ ಲಂಚ ಸ್ವೀಕರಿಸುವಾಗ VA ಲೋಕಾಯುಕ್ತ ಬಲೆಗೆ‌‌

ಮಂಗಳೂರು : ಅಜ್ಜನ ಮರಣ ಪ್ರಮಾಣ ಪತ್ರದ ದೃಢೀಕರಣಕ್ಕೆ 13 ಸಾವಿರ ಲಂಚ ಕೇಳಿದ ಚೇಳ್ಯಾರು ಗ್ರಾಮದ ವಿಎ ಶ್ರೀ ವಿಜಿತ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿ ಜಾಗ ಮಾರಾಟ ಮಾಡಲು ದಾಖಲಾತಿಗಳನ್ನು ತಯಾರು ಮಾಡುವ ವೇಳೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಜ್ಜನ ಮರಣ ಪ್ರಮಾಣ ಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಅದರಂತೆ ದೂರುದಾರರು ಸೆಪ್ಟೆಂಬರ್ ತಿಂಗಳಿನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ತನ್ನ ಅಜ್ಜನ ಮರಣದ ದೃಢಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ನಂತರ ಫಿರ್ಯಾದಿದಾರರು ಎರಡು ಮೂರು ಸಲ ಜೇಳ್ಳಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ದೃಢೀಕರಣ ಪತ್ರದ ಬಗ್ಗೆ ಶ್ರೀ ವಿಜಿತ್, ಗ್ರಾಮ ಆಡಳಿತ ಅಧಿಕಾರಿ, ಜೇಳ್ಯಾರು ಗ್ರಾಮ ಇವರಲ್ಲಿ ವಿಚಾರಿಸಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲ. ನಂತರ ಫಿರ್ಯಾದಿದಾರರು ದಿನಾಂಕ 20.11.2023 ರಂದು ಗ್ರಾಮ ಆಡಳಿತ ಅಧಿಕಾರಿಯವರ ಮೊಬೈಲ್ ನಂಬರಿಗೆ ಕಾಲ್ ಮಾಡಿ ಮಾತನಾಡಿದಾಗ ನಿಮ್ಮ ಅಜ್ಜನ ಮರಣದ ದೃಢೀಕರಣ ಪತ್ರ ರೆಡಿ ಇದೆ, ಜೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಬನ್ನಿ, ಬರುವಾಗ 15,000/- ತೆಗೆದುಕೊಂಡು ಬನ್ನಿ ಎಂದು ತಿಳಿಸಿರುತ್ತಾರೆ. ಆದರೆ ಅಷ್ಟು ಹಣ ಪಿರ್ಯಾದಿದಾರರು ತನ್ನಲ್ಲಿ ಇಲ್ಲ. ಎಂದಾಗ ನಾಳೆ ಅದು ತಂದು ಕೊಡಿ ಎಂದು ತಿಳಿಸಿರುತ್ತಾರೆ ಆಗ ಪಿರ್ಯಾದಿದಾರರು ಅಷ್ಟು ಹಣ ನನ್ನಲ್ಲಿ ಇಲ್ಲ ಎಂದು ತಿಳಿಸಿರುತ್ತಾರೆ.
ಪಿರ್ಯಾದಿದಾರರು ದಿನಾಂಕ 22.11.2023 ರಂದು ವಾಪಾಸ್ಸು ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ಶ್ರೀ ವಿಜಿತ್, ಗ್ರಾಮ ಆಡಳಿತ ಅಧಿಕಾರಿ, ಜೇಳ್ಯಾರು ಗ್ರಾಮ ಇವರಲ್ಲಿ ಮಾತನಾಡಿದಾಗ ಅವರು ಪಿರ್ಯಾದಿದಾರರ ಅಜ್ಜನ ಮರಣದ ದೃಢೀಕರಣ ಪತ್ರವನ್ನು ನೀಡಿ, ಮರಣ ದೃಢೀಕರಣ ಪತ್ರವನ್ನು ಮಾಡಿ ಕೊಟ್ಟದ್ದಕ್ಕಾಗಿ ರೂ 15,000/-ವನ್ನು ಸುರತ್ಕಲ್ ನಾಡಕಛೇರಿಗೆ ಬಂದು ಕೊಡಬೇಕು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಆಗ ಫಿರ್ಯಾದಿದಾರರು ಅವರಲ್ಲಿ ಸ್ವಲ್ಪ ಕಮ್ಮಿ ಮಾಡಿ ಎಂದಾಗ ಗ್ರಾಮಕರಣಿಕರು ಆಯಿತು ಅದರಲ್ಲಿ ಎರಡು ಸಾವಿರ ಕಮ್ಮಿ ಮಾಡಿ ಕೊಡಿ ಎಂದು ಅವರಲ್ಲಿ ಸ್ವಲ್ಪ ಕಮ್ಮಿ ಮಾಡಿ ಎಂದಾಗ ಗ್ರಾಮಕರಣಿಕರು ಆಯಿತು ಅದರಲ್ಲಿ ಎರಡು ಸಾವಿರ ಕಮ್ಮಿ ಮಾಡಿ ಕೊಡಿ ಎಂದು ಅಜ್ಜನ ಮರಣ ದೃಢೀಕರಣ ಪತ್ರವನ್ನು ಮಾಡಿಕೊಟ್ಟಿರುವುದಕ್ಕೆ 13,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ದಿನ ಮಂಗಳೂರು ತಾಲೂಕು ಚೇಳ್ಯಾರು ಗ್ರಾಮದ, ಗ್ರಾಮ ಆಡಳಿತ ಅಧಿಕಾರಿ, ಶ್ರೀ ವಿಜಿತ್ ರವರು ಪಿರ್ಯಾದುದಾರರಿಂದ ರೂ.13,000/- (ಹದಿಮೂರು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿರುತ್ತಾರೆ. ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.