Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಐಫೆಲ್ ಟವರ್ ಬಳಿ ಚಾಕು, ಸುತ್ತಿಗೆಯಿಂದ ದಾಳಿ-ಓರ್ವ ಸಾವು, ಇಬ್ಬರಿಗೆ ಗಾಯ

ಪ್ಯಾರಿಸ್‌: ಐತಿಹಾಸಿಕ ಪ್ಯಾರಿಸ್ ನಗರದ ಐಫೆಲ್ ಟವರ್ ಬಳಿ ದುಷ್ಕರ್ಮಿಯೊಬ್ಬ ಸುತ್ತಿಗೆ ಹಾಗೂ ಚಾಕುವಿನಿಂದ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾನೆ. ಪರಿಣಾಮ ಓರ್ವ ಪ್ರವಾಸಿಗರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಪ್ರವಾಸಿಗರು ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಐಫೆಲ್ ಟವರ್ ಆವರಣ ಸಾಕ್ಷಿಯಾಗಿದೆ. ಫ್ರೆಂಚ್ ಮೂಲದ 26 ವರ್ಷ ವಯಸ್ಸಿನ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಪ್ರವಾಸಿಗರು ಓಡಾಟ ಹೆಚ್ಚಾಗಿರುವ ಪ್ರದೇಶದಲ್ಲಿ ಏಕಾಏಕಿ ನುಗ್ಗಿದ ಈತ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾನೆ. ಈತ ಇದಕ್ಕೂ ಮೊದಲು 2016ರಲ್ಲಿ ಇನ್ನೊಂದು ದಾಳಿಯ ಸಂಚು ರೂಪಿಸಿದ್ದ. ಆಗ ಈತನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿತ್ತು. ಈಗ ಜೈಲಿನಿಂದ ಹೊರ ಬಂದು ಐಫೆಲ್ ಟವರ್ ಆವರಣದಲ್ಲಿ ಕ್ರೂರ ಕೃತ್ಯ ಎಸಗಿದ್ದಾನೆ. ಕೂಡಲೇ ಟೇಸರ್ ಸ್ಟನ್ ಗನ್ ಪ್ರಯೋಗಿಸಿ ಆತನನ್ನು ಸ್ಥಳದಿಂದಲೇ ಬಂಧಿಸಲಾಗಿದೆ ಎಂದು ಫ್ರಾನ್ಸ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.