Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜಮ್ಮುಕಾಶ್ಮೀರ ಆರ್ಟಿಕಲ್ 370 ರದ್ದು – ಕೇಂದ್ರದ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್

ನವದೆಹಲಿ : ಜಮ್ಮುಕಾಶ್ಮೀರ ಆರ್ಟಿಕಲ್ 370 ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದ್ದು, ಕೇಂದ್ರ ಸರಕಾರ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ. ಸಂವಿಧಾನದ ಆರ್ಟಿಕಲ್ 370 ನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸಲು ಅಧಿಕಾರಿ ಇದೆ ಎಂದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ದೇಶದ ಎಲ್ಲಾ ರಾಜ್ಯಗಳು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿವೆ.ಸಂವಿಧಾನ ವಿಧಿ 371ರಿಂದ ಜೆವರೆಗೆ ವಿವಿಧ ರಾಜ್ಯಗಳ ವಿಶೇಷ ವ್ಯವಸ್ಥೆಗಳ ಉದಾಹರಣೆಗಳಾಗಿವೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರವು ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ಹೀಗಾಗಿ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಂತ, ಹೀಗಾಗಿ ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಲಂ 370 ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ನಾವು ತೀರ್ಪಿಗೆ ಬಂದಿದ್ದೇವೆ. ಮಧ್ಯಂತರ ಪ್ರಕ್ರಿಯೆಯನ್ನು ಪೂರೈಸಲು ಪರಿವರ್ತನಾ ಉದ್ದೇಶವನ್ನು ಪೂರೈಸಲು ಇದನ್ನು ಪರಿಚಯಿಸಲಾಗಿದೆ. ಇದು ರಾಜ್ಯದಲ್ಲಿನ ಯುದ್ಧದ ಪರಿಸ್ಥಿತಿಗಳ ಕಾರಣದಿಂದಾಗಿ ತಾತ್ಕಾಲಿಕ ಉದ್ದೇಶಕ್ಕಾಗಿತ್ತು. ಹೀಗಾಗಿ ಇದು ಸಂವಿಧಾನದ ಭಾಗ 21 ರಲ್ಲಿ ಇರಿಸಲಾಗಿದೆ. ಆರ್ಟಿಕಲ್ 370 ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆಯನ್ನು ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರವು ಜಮ್ಮು-ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರವೂ ಅಸ್ತಿತ್ವದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಇಂದು ತೀರ್ಪಿನ ಪ್ರತಿಯನ್ನು ಓದುತ್ತಾ ಪ್ರಕಟಿಸಿದರು.

ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸಂವಿಧಾನ ವಿಧಿ 370 ರದ್ದತಿಯಲ್ಲಿ ಜಯ ಸಿಕ್ಕಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಕ್ಕಿದ್ದು, 2024ರ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.