Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡುತ್ತೇನೆ’ -ಮೋದಿ

ಗುಜರಾತ್: ಮೂರನೇ ಅವಧಿಯಲ್ಲೂ ಪ್ರಧಾನಿಯಾದರೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತನ್ನ ಸರ್ಕಾರ ಮುಂದಿನ 25 ವರ್ಷಕ್ಕೆ ಆರ್ಥಿಕ ಬೆಳವಣಿಗೆಗೆ ಗುರಿ ನಿಗದಿ ಮಾಡಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಪ್ರಧಾನಿ ಹೇಳಿದ್ದಾರೆ.

ಗುಜರಾತ್​ನ ಸೂರತ್​ನಲ್ಲಿ ನಡೆದ ಡೈಮಂಡ್ ಬೋರ್ಸ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ 25 ವರ್ಷಕ್ಕೆ ಗುರಿ ನಿಗದಿ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆಯೋ, 10 ಟ್ರಿಲಿಯನ್ ಡಾಲರ್ ಆರ್ಥಿಕತೆಯೋ ಒಟ್ಟಾರೆ ಮುಂದಿ 25 ವರ್ಷಗಳಿಗೆ ಸರ್ಕಾರ ಗುರಿ ನಿಗದಿ ಮಾಡಲಾಗಿದೆ. ತಾನು ಮೂರನೇ ಅವಧಿಗೆ ಪ್ರಧಾನಿ ಆದರೆ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಸೂರತ್ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಟಾಪ್-10 ನಗರಗಳಲ್ಲಿ ಒಂದು. ಸೂರತ್​ನ ಸ್ಟ್ರೀಟ್ ಫುಡ್, ಕೌಶಲ್ಯ ಅಭಿವೃದ್ಧಿ ಕೆಲಸ ಎಲ್ಲವೂ ಅದ್ಭುತ. ಒಂದು ಕಾಲದಲ್ಲಿ ಸೂರತ್ ಅನ್ನು ಸೂರ್ಯ ನಗರಿ ಎನ್ನುತ್ತಿದ್ದರು. ಇವತ್ತು ಇಲ್ಲಿನ ಜನರು ತಮ್ಮ ಪರಿಶ್ರಮದಿಂದ ಸೂರತ್ ಅನ್ನು ಡೈಮಂಡ್ ನಗರಿಯನ್ನಾಗಿ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂರತ್ ಜನತೆಯನ್ನು ಕೊಂಡಾಡಿದ್ದಾರೆ.