Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮಮಂದಿರ ಲೋಕಾರ್ಪಣೆ ವೇಳೆ ಹಳೇ ಕೇಸ್ ಹುಡುಕಿ ಜೈಲಿಗೆ ಹಾಕುವ ಕೆಲಸ ಹೆಮ್ಮೆ ತರುತ್ತಾ?’; ಕೋಟಾ

ಉಡುಪಿ : ಕಾನೂನು ಸುವಸ್ಥೆ ಪಾಲಿಸುವ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ 31 ವರ್ಷದ ಹಿಂದಿನ ಪ್ರಕರಣವನ್ನು ಓಪನ್ ಮಾಡಿದ್ದು ಸರ್ಕಾರದ ಚಟುವಟಿಕೆ ಎಲ್ಲಿಗೆ ತಲುಪಿದೆ ಎಂಬುವುದನ್ನು ತೋರಿಸಿಕೊಟ್ಟಿದೆ. ಕಾಂಗ್ರೆಸ್‌ ನ ದುರ್ನಡತೆ ಅತ್ಯಂತ ಕ್ರೂರ ಮತ್ತು ಖಂಡನೀಯ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಮಂದಿರ ಆಗಬೇಕು ಎಂದು ಸುಪ್ರೀಂಕೋರ್ಟ್ ತೀರ್ಮಾನ ಕೊಟ್ಟಿದೆ, ಸಾರ್ವಜನಿಕ ದೇಣಿಗೆಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣ ಆಗಿದೆ, ಆದ್ರೆ ಹಳೆಯ ಕೇಸ್ ಹುಡುಕಿ ಜೈಲಿಗೆ ಹಾಕುವ ಕೆಲಸ ನಿಮಗೆ ಹೆಮ್ಮೆ ತರುತ್ತದೆಯೇ? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಆಂಜನೇಯಗೆ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು ಅಯೋಧ್ಯೆ ರಾಮಮಂದಿರ ಕುರಿತು  ಇಡೀ ದೇಶ ಹೆಮ್ಮೆ ಪಡುವ ಕೆಲಸ ಆಗುತ್ತಿದೆ. ಸಿದ್ದರಾಮಯ್ಯ ರಾಮನಾಗಲಿ ಆಂಜನೇಯ ಹನುಮಂತ ಆದರೆ ನಮ್ಮ ಅಕ್ಷೇಪ ಇಲ್ಲ ಆದ್ರೆ ಅಯೋಧ್ಯೆಯಲ್ಲಿರುವುದು ಶ್ರೀರಾಮ ಮಂದಿರ ಇದು ದೇಶಕ್ಕೆ ಮತ್ತು ಪ್ರಪಂಚಕ್ಕೆ ಹೆಮ್ಮೆಯ ವಿಚಾರವಾಗಿದೆ. ರಾಮಮಂದಿರ ಗೌರವಿಸಬೇಕಾದ್ದು ಪಕ್ಷ ಮತ್ತು ಸರಕಾರದ ಜವಾಬ್ದಾರಿ ಎಂದರು.

40 ಸಾವಿರ ಕೋಟಿ ಹಗರಣ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರೀಯಿಸಿದ ಅವರು ಯತ್ನಾಳ್ ಅವರ ಎಲ್ಲ ಹೇಳಿಕೆಗಳು ಚರ್ಚೆಯಲ್ಲಿದ್ದು ಕೇಂದ್ರ ನಾಯಕರು ಕರೆದು ಯತ್ನಾಳ್ ಗೆ ಬುದ್ಧಿ, ತಿಳುವಳಿಕೆ ಹೇಳುತ್ತಾರೆ. ಕೇಂದ್ರದ ನಾಯಕರು ಎಲ್ಲವನ್ನು ಗಮನಿಸಿದ್ದಾರೆ ಎಂದಿದ್ದಾರೆ.
ಮರಗಳ್ಳತನ ಪ್ರಕರಣ ಕುರಿತ ಸಂಸದ ಪ್ರತಾಪ್ ಸಿಂಹ ತಮ್ಮ ವಿಕ್ರಂ ಸಿಂಹನ ಬಂಧನ ವಿಚಾರ ಮಾತನಾಡಿದ ಅವರು ಎಫ್ಐಆರ್ ನಲ್ಲಿ ಹೆಸರಿಲ್ಲದಿದ್ದರೂ ವಿಕ್ರಂ ಸಿಂಹನ ಬಂಧಿಸಲಾಗಿದೆ. ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಬಿಜೆಪಿ, ಸಂಸದನ ತಮ್ಮ ಎಂಬ ಕಾರಣಕ್ಕೆ ಬಂಧಿಸಲಾಗಿದ್ದು ಇಂತಹ ವಿಪರೀತಕ್ಕೆ ಸರಕಾರ ಹೋಗಬಾರದಿತ್ತು. ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿಯ ಮಗನನ್ನು ಗೆಲ್ಲಿಸುವ ಕಾರಣಕ್ಕೆ ಇಷ್ಟೆಲ್ಲ ಮಾಡಿದ್ದು ಸರಿಯಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.