Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಇದ್ದರು ಸಹ ವರ್ಗಾವಣೆಯಾಗಿಲ್ಲವೆ? ಇಲ್ಲಿದೆ ಅದರ ಪೂರ್ತಿ ವಿವರ

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು ಇದೀಗ ನಾಲ್ಕನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರಂತೆ ಎಲ್ಲಾ ಮಹಿಳೆಯರಿಗೆ ಈಗಲೂ ಕೂಡ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಇದ್ದರು ಸಹ ಅವರಿಗೆ ವರ್ಗಾವಣೆಯಾಗಿರುವುದಿಲ್ಲ ಅದಕ್ಕೆ ಮುಖ್ಯ ಕಾರಣ ತಾಂತ್ರಿಕ ದೋಷಗಳು ಇರಬಹುದು ಅಥವಾ ಬೇರೆ ಯಾವುದೇ ಕಾರಣಗಳು ಕೂಡ ಇರಬಹುದಾಗಿದೆ. ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ಜನವರಿ ತಿಂಗಳ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಂದೇ ಬರುತ್ತದೆ.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರಲ್ಲಿ 80ರಷ್ಟು ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವು ಬಂದಿದೆ ಆದರೆ 20 ಪರ್ಸೆಂಟ್ ಮಹಿಳೆಯರಿಗೆ ಹಣ ಬಂದಿರುವುದಿಲ್ಲ. ಎಲ್ಲ 31 ಜಿಲ್ಲೆಗಳಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಿದ್ದು ಒಂದೇ ದಿನ ಎಲ್ಲಾ ಮಹಿಳೆಯರಿಗೂ ಕ್ರೆಡಿಟ್ ಆಗಿರುವುದಿಲ್ಲ ಒಂದೊಂದು ದಿನಕ್ಕೆ ಒಂದೊಂದು ಕಡೆ ಜಿಲ್ಲೆಗಳಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರದೆ ಇದ್ದರೆ ಸರ್ಕಾರ ತಿಳಿಸಿರುವ ಹಾಗೆ ಸರ್ಕಾರವು ಪ್ರಾರಂಭಿಸಿರುವ ಗೃಹಲಕ್ಷ್ಮಿ ಕ್ಯಾಂಪ್ ನಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ಡಿಸೆಂಬರ್ 27 28 ಹಾಗು 29ರಂದು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪನ್ನು ನಡೆಸಿದ್ದು ಮಹಿಳೆಯರು ಈ ಕ್ಯಾಂಪ್ಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬರವಂತೆ ಮಾಡಿಕೊಳ್ಳಬಹುದಾಗಿದೆ.

ಹೀಗೆ ಶೇಕಡ 100ರಷ್ಟು ಯಶಸ್ಸನ್ನು ಕಾಣುವ ಉದ್ದೇಶದಿಂದ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ ಕ್ಯಾಂಪನ್ನು ನಡೆಸಿದ್ದು ಈ ಕ್ಯಾಂಪ್ನ ಮೂಲಕ ಶೇಕಡ ನೂರರಷ್ಟು ಮಹಿಳೆಯರಿಗೆ ಹಣವನ್ನು ವರ್ಗಾವಣೆ ಮಾಡುವುದರ ಬಗ್ಗೆ ಪ್ರಯತ್ನಿಸುತ್ತಿದೆ.