Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸ್ಮಾರ್ಟ್  ಮೊಬೈಲ್‍ಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆಬಹುದು ಹೀಗೆ.!

 

ಬೆಂಗಳೂರು: ಸಾರ್ವಜನಿಕರು ತಮ್ಮ ಸ್ಮಾರ್ಟ್ ಮೊಬೈಲ್‍ಗಳಲ್ಲಿ  ಆಯುಷ್ಮಾನ್   ಭಾರತ್ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಆಯುಷ್ಮಾನ್ ಕಾರ್ಡ್‍ಗಳಿಂದ 1650 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.1.5 ಲಕ್ಷದವರೆಗೆ ಸುಸಜ್ಜಿತ ಸರ್ಕಾರಿ ಅಥವಾ ರಾಜ್ಯಾದ್ಯಂತ ನೋಂದಾಯಿತ 3200  ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವೆಚ್ಚ ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಡ್‍ಗಳನ್ನು ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್‍ನೊಂದಿಗೆ ತಮ್ಮ ಮೊಬೈಲ್‍ನಲ್ಲಿಯೇ (ಆಂಡ್ರಾಯ್ಡ್ ಮೊಬೈಲ್)  ನೋಂದಣಿ ಮೂಲಕ ಕಾರ್ಡ್‍ಗಳನ್ನು ಪಡೆಯಬಹುದು ಎಂದು ತಿಳಿಸಿದರು.

ತಮ್ಮ ಮೊಬೈಲ್‍ನ  https://beneficiary.nha.gov.in/  ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೆÇೀರ್ಟಲ್ ಕಂಡು ಬರುತ್ತದೆ. ಪೆÇೀರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್‍ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು. ಒಟಿಪಿ ನೊಂದಾಯಿಸಿ ಸಬ್‍ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ಪೆÇರ್ಟಲ್ ಒಪನ್ ಆಗುತ್ತದೆ.

ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ಎನ್ನುವಲ್ಲಿ  ತಮ್ಮ ಮೂಲ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲೈಮ್‍ಟೈಪ್ ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.

ಈಗಾಗಲೇ ಎಬಿ ಪಿ.ಎಮ್.ಜೆ.ವೈ-ಸಿಎಮ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಬೇರೆ ಯಾವುದಾದರೂ ಯೋಜನೆಗೆ ನೋಂದಣಿ  (ಇ-ಕೆವೈಸಿ) ಲಿಂಕ್ ಮಾಡಿಕೊಂಡಿದ್ದರೆ ನೇರವಾಗಿ ಪೆÇರ್ಟಲ್‍ನಲ್ಲಿ ಕಾರ್ಡ್ ಜನರೇಷನ್ ವೆರಿಪೈ ಎಂದು ಕಂಡು ಬರುತ್ತದೆ.

ಒಂದು ವೇಳೆ ಬೇರೆ ಯಾವುದಾದರು ಯೋಜನೆಗೆ ಕಾರ್ಡ್ ಅನ್ನು ನೋಂದಣಿ ಮಾಡದೇ ಇದ್ದರೆ (ನಿಮ್ಮ ಇ-ಕೆವೈಸಿ ಹೊಂದಿಲ್ಲದಿದ್ದರೆ) ಆಧಾರ್ ಒಟಿಪಿ ಮುಖಾಂತರ ಇ-ಕೆವೈಸಿ ಮಾಡಿಕೊಂಡು ಕಾರ್ಡ್‍ನ್ನು ಪಡೆಯಬಹುದು.