Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಷರಫ್ ಸಾವನ್ನಪ್ಪಿದ ಬಳಿಕ ಇಂದು ಗಲ್ಲುಶಿಕ್ಷೆ ಎತ್ತಿಹಿಡಿದ ಪಾಕ್ ಸುಪ್ರೀಂ

ಇಸ್ಲಾಮಾಬಾದ್ : ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಮಿಲಿಟರಿ

ಆಡಳಿತಗಾರ ದಿವಂಗತ ಜನರಲ್ ಪರ್ವೇಜ್ ಮುಷರಫ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ್ ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿಹಿಡಿದಿದೆ.

ಸರ್ವಾಧಿಕಾರಿ ಮುಷರ್ರಫ್ 1999ರ ಕಾರ್ಗಿಲ್ ಯುದ್ಧದ ಹಿಂದಿನ ಸೂತ್ರಧಾರಿಯಾಗಿದ್ದ. ಪಾಕಿಸ್ತಾನದ ಕೊನೆಯ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ದೀರ್ಘಕಾಲದ ಅನಾರೋಗ್ಯದಿಂದ 2023ರ ಫೆಬ್ರವರಿ 5ರಂದು ಮೃತಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ಮುಷರಫ್ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಸ್ವಯಂ ಆಗಿ ಗಡಿಪಾರುಗೊಂಡಿದ್ದರು.

ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಚೀಫ್ ಜಸ್ಟೀ ಸ್ ಖ್ವಾಝಿ ಫಾಯೇಝ್ ಇಸಾ ಮತ್ತು ಜಸ್ಟೀ ಸ್ ಮನ್ಸೂರ್ ಅಲಿ ಶಾ, ಜಸ್ಟೀ ಸ್ ಅಮಿನುದ್ದೀ ನ್ ಖಾನ್, ಜಸ್ಟೀ ಸ್ ಅಥಾರ್ ಮಿನಲ್ಲಾ ಅವರನ್ನೊಳಗೊಂಡ ನಾಲ್ವರ ಸದಸ್ಯರ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು.
2007ರ ನವೆಂಬರ್ ನಲ್ಲಿ ಜನರಲ್ ಪರ್ವೇಜ್ ಮುಷರಫ್ ಪಾಕಿಸ್ತಾನದಲ್ಲಿ ಅಸಂವಿಧಾನಿಕವಾಗಿ ಎಮರ್ಜೆನ್ಸಿ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದು, ಇದು ದೇಶದ್ರೋ ಹ ಎಂಬುದಾಗಿ ಆರೋಪಿಸಿ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಜ್) ಪಾಕ್ ವಿಶೇಷ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿ ಯ ವಿಚಾರಣೆ ನಡೆಸಿದ್ದ ವಿಶೇಷ ಕೋರ್ಟ್‌2019ರ ಡಿಸೆಂಬರ್ 17ರಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ವಿಶೇಷ ಕೋರ್ಟ್‌ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮುಷರಫ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಪಾಕ್ ಸುಪ್ರೀಂ ಕೋರ್ಟ್‌ತೀರ್ಪನ್ನು ಕಾಯ್ದಿರಿಸಿದ್ದು, ಇಂದು ತೀರ್ಪನ್ನು ನೀಡಿದೆ.