Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತ-ಮಾಲ್ಡೀವ್ಸ್ ಬಿಕ್ಕಟ್ಟು: ಮೌನ ಮುರಿದ ಸಚಿವ ಜೈಶಂಕರ್

ನಾಗ್ಪುರ: ” ರಾಜಕೀಯ ಯಾವತ್ತಿದ್ದರೂ ರಾಜಕೀಯವೇ, ಪ್ರತಿಯೊಂದು ದೇಶವೂ, ಇತರ ದೇಶಗಳಿಗೆ ಸಾರ್ವಕಾಲಿಕವಾಗಿ ಬೆಂಬಲವನ್ನು ನೀಡುತ್ತದೆ ಮತ್ತು ಆ ದೇಶದ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಗ್ಯಾರಂಟಿ ಕೊಡಲು ಸಾಧ್ಯವಿಲ್ಲ” ಈ ಮಾತನ್ನು ನಾನು ಒಪ್ಪುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಸಭೆಯಲ್ಲಿ, ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ವಿಚಾರವಾಗಿ ಪ್ರಶ್ನಿಸಿದಾಗ ಈ ಬಗ್ಗೆ ಮೌನ ಮುರಿದಿರುವ ಜೈಶಂಕರ್, “ದೇಶದಲ್ಲಿ ರಾಜಕೀಯ ವ್ಯವಸ್ಥೆ ಎಂದ ಮೇಲೆ ಏರಿಳಿತ ಇರುವುದಂತೂ ಸಾಮಾನ್ಯ. ಅದರೆ ಭಾರತವೂ ಜಾಗತಿಕವಾಗಿ ಜನರಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸುತ್ತ ಕಳೆದ ಕೆಲ ವರ್ಷಗಳಿಂದ ಭಾರತದ ಮತ್ತಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಾವು ಇಂದು ದೇಶದಲ್ಲಿ ಅತ್ಯುತ್ತಮ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ, ವಿದ್ಯುತ್, ಪ್ರಸರಣ, ಇಂಧನ ಪೂರೈಕೆ, ಹೂಡಿಕೆ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದು, ದೇಶದ ಜನ ವಿದೇಶಗಳಿಗೆ ಪ್ರವಾಸಕ್ಕೆ ತೆರಳುವುದನ್ನು ಬೆಂಬಲಿಸುತ್ತೇವೆ. ಇವೆಲ್ಲವೂ ನೀವು ಆ ಸಂಬಂಧಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತೀರಿ ಎಂಬುದರ ಭಾಗವಾಗಿದೆ” ಎಂದು ಒತ್ತಿ ಹೇಳಿದರು.