Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಾಣ ಪ್ರತಿಷ್ಠೆಗಾಗಿ ಕಠಿಣ ವ್ರತ: ಉಪವಾಸವಿದ್ದು, ನೆಲದ ಮೇಲೆ ಮಲಗುತ್ತಿರುವ ಪ್ರಧಾನಿ

ಅಯೋಧ್ಯೆ:ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇದ್ದು, ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದೆ. ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಗೂ ಮುನ್ನ ಪ್ರಧಾನಿ ಮೋದಿ 11 ದಿನಗಳ ಕಠಿಣ ಅನುಷ್ಠಾನ ಆಚರಿಸಿಸುತ್ತಿದ್ದಾರೆ.

ಈ ವೇಳೆ ಅವರು ಬರೀ ಎಳೆನೀರನ್ನು ಮಾತ್ರ ಕುಡಿಯುತ್ತಿದ್ದಾರೆ. ಇನ್ನು ಬರೀ ನೆಲದ ಮೇಲೆ ಮಾತ್ರ ಮಲಗುತ್ತಿದ್ದಾರೆ. ಧ್ಯಾನ, ತಪಸ್ಸು, ಸಾತ್ವಿಕ ಆಹಾರ ಸೇವನೆ 11 ದಿನಗಳ ವ್ರತ ಆಚರಿಸಿರುವ ಪ್ರಧಾನಿ ವಿಶೇಷ ಧ್ಯಾನವನ್ನೂ ಕೈಗೊಂಡಿದ್ದಾರೆ. ಧ್ಯಾನ ಮತ್ತು ವಿಶೇಷ ಸಾತ್ವಿಕ ಆಹಾರದೊಂದಿಗೆ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುವುದನ್ನು ಒಳಗೊಂಡಿರುತ್ತದೆ, ಅದು ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಲವಾರು ಇತರ ವಸ್ತುಗಳನ್ನು ನಿರ್ಬಂಧಿಸುತ್ತದೆ.

ಇನ್ನು ತಮ್ಮ 11 ದಿನಗಳ ಅನುಸ್ಥಾನದ ಭಾಗವಾಗಿ ಪ್ರಧಾನಿ ಮೋದಿ ಅವರು ನೆಲದ ಮೇಲೆ ಮಲಗುತ್ತಾರೆ, ಮುಂಜಾನೆ ಬೇಗ ಏಳುತ್ತಾರೆ. ಜಪ ಮತ್ತು ಧ್ಯಾನ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ, ದಿನದ ಸ್ವಲ್ಪ ಸಮಯ ಮೌನವಾಗಿರುತ್ತಾರೆ, ಸ್ವಲ್ಪ ಮತ್ತು ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ.

ಈ ಕುರಿತಾಗಿ ಪ್ರಧಾನಿ ಮೋದಿಯವರು ಎಕ್ಸ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಕೇಳಿದ್ದಾನೆ. ಗಮನದಲ್ಲಿಟ್ಟುಕೊಂಡು, ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ನಾನು ನಿಮ್ಮೆಲ್ಲರಿಂದ ಆಶೀರ್ವಾದವನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.