Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಈ ಹಳ್ಳಿಗಳಲ್ಲಿ ವಿದ್ಯುತ್ ಗೋಪುರ ಮುಟ್ಟದಂತೆ ಸೂಚನೆ.!

 

ಚಿತ್ರದುರ್ಗ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ  ಹಾನಗಲ್ 66/11 ಕೆವಿ ವಿದ್ಯುತ್ ಕೇಂದ್ರದಿಂದ ರಾಂಪುರ 66/11 ಕೆವಿ ವಿದ್ಯುತ್ ಕೇಂದ್ರದವರೆಗೆ 27.10ಕಿ.ಮೀ 66ಕೆವಿ ಜೋಡಿ ಗೋಪುರದಲ್ಲಿ ಕಯೋಟ್ ವಾಹಕ ಬಳಸಿ ಒಂಟಿ ವಿದ್ಯುತ್ ಪ್ರಸರಣ ಮಾರ್ಗ ಹಾಗೂ ನಾಗಸಮುದ್ರ 66/11ಕೆವಿ ಉಪಕೇಂದ್ರಕ್ಕೆ ಲಿಲೋ ಮಾರ್ಗ ಮತ್ತು ರಾಂಪುರ 66ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಒಂದು ಸಂಖ್ಯೆಯ 66ಕೆವಿ ಟರ್ಮಿನಲ್ ಬೇ ನಿರ್ಮಾಣ, ಹಾನಗಲ್ 66/11ಕೆವಿ ವಿದ್ಯುತ್ ಒಂದು ಸಂಖ್ಯೆಯ 66ಕೆವಿ ಟರ್ಮಿನಲ್, ನಾಗಸಮುದ್ರ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಎರಡು ಸಂಖ್ಯೆಯ 66ಕೆವಿ ಟರ್ಮಿನಲ್ ಬೇಗಳ ನಿರ್ಮಾಣವು ಮುಕ್ತಾಯಗೊಂಡಿರುತ್ತದೆ.

ಈ  66ಕೆವಿ  ವಿದ್ಯುತ್ ಮಾರ್ಗವನ್ನು ಇದೇ ಜನವರಿ 30ರಂದು ಅಥವಾ ತದನಂತರ ಚೇತನಗೊಳಿಸುತ್ತಿರುವುದರಿಂದ  ಈ 66 ಕೆವಿ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ,ಹತ್ತುವುದಾಗಲಿ, ಮರದ ರಂಬೆ, ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ವಿದ್ಯುತ್ ಮಾರ್ಗದ ಮೊಗಸಾಲೆಯಲ್ಲಿ ಅಪಾಯದ ಮಟ್ಟದಲ್ಲಿರುವ ಮರಗಳನ್ನು ಸುರಕ್ಷತೆಯ ದೃಷ್ಠಿಯಿಂದ ತೆಗೆದು ಹಾಕಲು ನಿಗಮದ ನಿಯಾಮಾನುಸಾರ ಸೂಕ್ತ ಪರಿಹಾರ ಪಡೆದುಕೊಂಡು ಮರಗಳನ್ನು ತೆಗೆಯದೇ ಇರುವ ಭೂ ಮಾಲೀಕರು ಕೂಡಲೇ ಮಾರ್ಗದ  ಮೊಗಸಾಲೆಯಲ್ಲಿ  ಇರುವ ಮರಗಳನ್ನು ಕಡಿದು ಹಾಕಲು ಅನುಮತಿ ನೀಡುವುದು. ಒಂದು ವೇಳೆ ಈ ಎಚ್ಚರಿಕೆ ಉಲ್ಲಂಘಿಸಿದ್ದಲ್ಲಿ ಮೇಲೆ ತಿಳಿಸಿದ ವಿದ್ಯುತ್ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ.

ವಿದ್ಯುತ್ ಮಾರ್ಗ ಹಾದುಹೋಗುವ ಪ್ರದೇಶಗಳು: ಹಾನಗಲ್, ಯರಜೇನಹಳ್ಳಿ, ಕೊಮ್ಮನಪಟ್ಟಿ, ಮೇಗಳಹಟ್ಟಿ, ಕೆಳಗಳಹಟ್ಟಿ, ಕಾಟನಾಯಕನಹಳ್ಳಿ, ಗುಡ್ಡದಹಳ್ಳಿ, ಬೈರಾಪುರ, ನಾಗಸಮುದ್ರ, ಹೆರೂರು, ತೆಂಗಿನಗೌರಸಮುದ್ರ, ರಾಮಸಾಗರ, ದೇವಸಮುದ್ರ, ಕೆರೆಕೊಂಡಪುರ ಮತ್ತು ರಾಂಪುರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದುಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಚಿತ್ರದುರ್ಗ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ