Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಧಾನಿ ಮೋದಿ ಹೆಸರಿನಲ್ಲಿ ಮೂರು ಯೋಜನೆ ಜಾರಿಗೆ ಮುಂದಾದ ಗುಜರಾತ್ ಸರ್ಕಾರ

ಗಾಂಧಿನಗರ:ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮೂರು ಯೋಜನೆಯನ್ನು ಜಾರಿಗೊಳಿಸಲು ಗುಜರಾತ್‌ ಸರ್ಕಾರವು ಮುಂದಾಗಿದೆ.

2024-25 ಹಣಕಾಸು ವರ್ಷದ ರಾಜ್ಯ ಬಜೆಟ್‌ ಅನ್ನು ಫೆ. 2 ರಂದು ಹಣಕಾಸು ಸಚಿವ ಕನುಭಾಯಿ ದೇಸಾಯಿ ಅವರು ಮಂಡಿಸಿದ್ದು. ಇದೇ ಸಮಯದಲ್ಲ್ಲಿ ನಮೋ ಲಕ್ಷ್ಮಿ, ನಮೋ ಸರಸ್ವತಿ, ನಮೋ ಶ್ರೀ ಹೆಸರಿನ ಮೂರು ಯೋಜನೆಗಳನ್ನು ಘೋಷಣೆ ಮಾಡಿದರು.

ನಮೋ ಲಕ್ಷ್ಮಿ : ಈ ಯೋಜನೆಯು ಬಾಲಕಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಆರಂಭಿಸಲಾಗಿದ್ದು ಈ ಯೋಜನೆಯ ಅಡಿ 9 ಮತ್ತು 10 ತರಗತಿಯಲ್ಲಿ ವರ್ಷಕ್ಕೆ 10 ಸಾವಿರ ರೂ. ನೀಡಿದರೆ 11 ಮತ್ತು 12ನೇ ತರಗತಿಯಲ್ಲಿ 15 ಸಾವಿರ ರೂ. ನೀಡಲಾಗುತ್ತದೆ. 12ನೇ ತರಗತಿ ಮುಗಿಯುವ ವೇಳೆ ಬಾಲಕಿಯೊಬ್ಬಳಿಗೆ ಒಟ್ಟು 50 ಸಾವಿರ ರೂ. ಸಿಗಲಿದೆ. 2024-25ರಲ್ಲಿ ಈ ಯೋಜನೆ ಜಾರಿಗೆ ಒಟ್ಟು 1,250 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

ನಮೋ ಸರಸ್ವತಿ: ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಂದ ವಿಜ್ಞಾನ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳಿಗೆ 11ನೇ ತರಗತಿಯಲ್ಲಿ ಓದುವಾಗ ವಾರ್ಷಿಕ 10,000 ಮತ್ತು 12 ನೇ ತರಗತಿಯಲ್ಲಿ ಓದುವಾಗ 15,000 ರೂ. ಸಹಾಯಧನ ನೀಡಲಾಗುತ್ತದೆ.

ನಮೋ ಶ್ರೀ : ಈ ಯೋಜನೆಯಡಿ, SC, ST, NFSA ಮತ್ತು PM-JAY ಫಲಾನುಭವಿಗಳು ಸೇರಿದಂತೆ 11 ವರ್ಗಗಳಿಗೆ ಸೇರಿದ ಗರ್ಭಿಣಿಯರಿಗೆ 12,000 ರೂ. ಸಹಾಯವನ್ನು ನೀಡಲಾಗುತ್ತದೆ.