Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಫೆ. 6 ರಿಂದ ಸುತ್ತೂರು ಜಾತ್ರೆ.! ಈ ಬಾರಿ  ದನಗಳ ಪರಿಷೆ.! ಗಣ್ಯರು ಭಾಗಿ.!

 

 

ಮೈಸೂರು: ಫೆ.6ರಿಂದ 11ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ (ಸುತ್ತೂರು ಜಾತ್ರೆ) ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಎಸ್.ಮಂಜುನಾಥ್ ತಿಳಿಸಿದರು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತಯಾರಿ ಭರದಿಂದ ಸಾಗಿದೆ.

ಬರಗಾಲದಲ್ಲಿ ಕಡಿಮೆ ನೀರು ಬಳಸಿ ಲಾಭದಾಯಕ ಕೃಷಿ ಮಾಡುವ ಬಗೆ’ ತಿಳಿಸುವ ಪ್ರಾತ್ಯಕ್ಷಿಕೆ ಒಳಗೊಂಡ ಕೃಷಿ ಮೇ, ಕೃಷಿ ಪರಿಕರಗಳ ವಸ್ತುಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ಸಾಂಸ್ಕೃತಿಕ ಮೇಳ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಂಗೋಲಿ ಸ್ಪರ್ಧೆ, ಧಾರ್ಮಿಕ ಸಭೆ, ಚಿತ್ರಸಂತೆ, ಚಿತ್ರಕಲೆ ಹಾಗೂ ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ತೆಪ್ಪೋತ್ಸವ, ಕಪಿಲಾರತಿ, ಲಕ್ಷದೀಪೋತ್ಸವ ಜರುಗಲಿದೆ.

ಎಲ್ಲ ಜಾತಿಗಳ ಮಠಾಧೀಶರು, ಧರ್ಮಗುರುಗಳು, ಕೇಂದ್ರ, ರಾಜ್ಯ ಸಚಿವರು ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಬಾರಿ ದನಗಳ ಪರಿಷೆ ನಡೆಯಲಿದೆ. ಹೋದ ವರ್ಷ ಚರ್ಮಗಂಟು ರೋಗ ಹರಡುತ್ತಿದ್ದ ಕಾರಣದಿಂದ ದನಗಳ ಪರಿಷೆ ರದ್ದುಪಡಿಸಲಾಗಿತ್ತು.

ಫೆ.7ರಂದು ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಫೆ.8ರಂದು ಬೆಳಿಗ್ಗೆ 10.30ಕ್ಕೆ ರಥೋತ್ಸವ ನೆರವೇರಲಿದೆ. ನಂತರ ಧಾರ್ಮಿಕ ಸಭೆ, ಸಂಜೆ 4ಕ್ಕೆ ದನಗಳ ಜಾತ್ರೆ ನಡೆಯಲಿದೆ ಎಂದರು.

(ಸಾಂದರ್ಭಿಕ ಚಿತ್ರ)