Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಬುಧಾಬಿಯ ಮೊದಲ ಹಿಂದೂ ದೇವಾಲಯ ಫೆ. 14ರಂದು ಪ್ರಧಾನಿ ಮೋದಿ ಉದ್ಘಾಟನೆ

ನವದೆಹಲಿ: ಅಬುಧಾಬಿಯಲ್ಲಿ ನಿರ್ಮಾಣದವಾದ ಮೊದಲ ಹಿಂದೂ ದೇವಾಲಯ ಉದ್ಘಾಟನೆಗೆ ಸಜ್ಜಾಗಿದೆ. ಇದೇ ಫೆಬ್ರವರಿ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಸ್ವಾಮಿ ನಾರಾಯಣ ಮಂದಿರವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಸ್ವಾಮಿ ನಾರಾಯಣ ಸಂಸ್ಥೆಯ (ಬಿಎಪಿಎಸ್) ಅಧಿಕೃತ ಪತ್ರಿಕಾ ಪ್ರ ಕಟಣೆ ತಿಳಿಸಿದ್ದು , ಈ ದೇವಾಲಯ ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯವಾಗಿದೆ. ಅಬುಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ಈ ದೇವಾಲಯ ತಲೆ ಎತ್ತಿದೆ. ಉದ್ಘಾ ಟನೆ ಹಿನ್ನೆಲೆ ಬಿಎಪಿಎಸ್ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರುಯುಎಇಗೆ ಆಗಮಿಸಿದ್ದಾರೆ. ಈ ಮಂದಿರದ ಉದ್ಘಾ ಟನೆಯನ್ನು ‘ಸೌಹಾರ್ದತೆಯ ಹಬ್ಬ ’ದಂತೆ ಆಚರಿಸಲಾಗುತ್ತದೆ. ಜನರ ನಡುವೆ ಸಾಮರಸ್ಯ ವನ್ನು ಬೆಳೆಸುವುದು ಈ ಉದ್ಘಾ ಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾ ಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರ ಕಟಣೆಯಲ್ಲಿ ತಿಳಿಸಿದೆ.

2019 ರ ಡಿಸೆಂಬರ್‌ನಲ್ಲಿ 27 ಎಕರೆ ಭೂಮಿಯಲ್ಲಿ ಮಂದಿರದ ನಿರ್ಮಾಣ ಪ್ರಾರಂಭವಾಗಿದ್ದು ಇದು ಸೈಟ್ ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯಿಂದ ಅಲ್ ರಹ್ಬಾ ಬಳಿ ಇರುವ ಅಬು ಮುರೇಖಾಹ್ ನಲ್ಲಿದೆ

ಇದರ ನಿರ್ಮಾಣಕ್ಕಾಗಿ, ಉತ್ತರ ರಾಜಸ್ಥಾನದಿಂದ ಅಬುಧಾಬಿಗೆ ಟನ್ಗಳಷ್ಟು ಗುಲಾಬಿ ಮರಳುಗಲ್ಲುಗಳನ್ನು ಕಳುಹಿಸಲಾಗಿತ್ತು. ಉತ್ತರ ಭಾರತದ ರಾಜ್ಯದಿಂದ ಬಾಳಿಕೆ ಬರುವ ಕಲ್ಲುಗಳನ್ನು 50 °C (122 °F) ವರೆಗಿನ ಸುಡುವ ಬೇಸಿಗೆಯ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕಾಗಿ ಆಯ್ಕೆಮಾಡಲಾಗಿತ್ತು.