Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನ ನಿಷೇಧಕ್ಕೆ ಅಸಮಾಧಾನ

ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಎಫ್ & ಬಿ ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಫೆ. 16 ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಸಂಜೆ 5ರಿಂದ ಫೆ. 16ರ ಮಧ್ಯರಾತ್ರಿವರೆಗೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ, ಪಾಪ್ಯೂಲರ್ ನೈಬರ್ ಹುಡ್ ಪಬ್-1522 ಸಂಸ್ಥಾಪಕ ಚೇತರ್ ಹೆಗಡೆ ಅವರು ಪ್ರೇಮಿಗಳ ದಿನದಂದು ಹೆಚ್ಚೆಚ್ಚು ಜನರು ರೆಸ್ಟೋರೆಂಟ್ ಗಳಿಗೆ ಬರುತ್ತಾರೆ. ಇದಕ್ಕಾಗಿಯೇ ನಾವು ತಿಂಗಳಾನುಗಟ್ಟಲೆಯಿಂದ ಸಿದ್ಧತೆಗಳ ಆರಂಭಿಸಿದ್ದೆವು. ಆದರೆ, ಸರ್ಕಾರ ಈ ನಿರ್ಧಾರ ನಮಗೆ ನಷ್ಟವನ್ನು ತಂದೊಡ್ಡಲಿದೆ ಎಂದು ಹೇಳಿದ್ದಾರೆ.

ಪ್ರೇಮಿಗಳ ದಿನಾಚರಣೆಗಾಗಿ ಡಿಜೆ,ವಿಶೇಷ ಮೆನು ಸೇರಿದಂತೆ ಹಲವು ಸಿದ್ಧತೆಗಳನ್ನು ನಡೆಸಿದ್ದೆವು. ಇದೀಗ ಎಲ್ಲವೂ ನಷ್ಟವಾದಂತಾಗಿದೆ ಎಂದು ಎನ್‌ಆರ್‌ಎಐ ಜಂಟಿ ಕಾರ್ಯದರ್ಶಿ ಹಾಗೂ ಜನಪ್ರಿಯ ಬಾರ್ ವಾಟ್ಸನ್‌ ಮಾಲೀಕ ಅಮಿತ್ ರಾಯ್ ರವರು ಹೇಳಿದ್ದಾರೆ.

ಬೆಂಗಳೂರು ಅತೀ ಹೆಚ್ಚು ಯುವಕರನ್ನು ಹೊಂದಿರುವ ನಗರವಾಗಿದ್ದು ಆದ್ದರಿಂದ ಜನರು ಪ್ರೇಮಿಗಳ ದಿನಾಚರಣೆ ಅದ್ಧೂರಿಯಾಗಿ ಆಚರಿಸಲು ಇಷ್ಟಪಡುತ್ತಾರೆ ಹಾಗೂ ಆಹಾರ ಮತ್ತು ಉದ್ಯಮ ಕ್ಷೇತ್ರದಿಂದ ಬರುತ್ತಿರುವ ಆದಾಯ ಎಷ್ಟಿದೆ ಎಂಬುದು ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ. ಇದೀಗ ಉದ್ಯಮಕ್ಕೆ ಆಗುವ ನಷ್ಟದ ಬಗ್ಗೆ ತಿಳಿದು ಎಚ್ಚರಗೊಳ್ಳಬೇಕಿದೆ ಎಂದು ಲೀಸರ್ ಎಂಟರ್‌ಟೈನ್‌ಮೆಂಟ್‌ನ ನರೇನ್ ಬೆಲಿಯಪ್ಪ ಎಂಬುವವರು ಹೇಳಿದ್ದಾರೆ.