Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌.! ಫೆಬ್ರವರಿ 14 ರಿಂದ 17ರ ವರೆಗೂ ಈ ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧ

ಮದ್ಯ ಮಾರಾಟ ನಿರ್ಬಂಧ ಏಕೆ?

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆ ಇರುವ ಕಾರಣ ಫೆ 16 ರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿ ಇರಲಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊರತಾದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗುವುದು ಎಂಬ ಮಾಹಿತಿ ತಿಳಿದಿದೆ.

1951ರ ಪ್ರಜಾ ಪ್ರತಿನಿಧಿಯ ಕಾಯ್ದೆಯ ಸೆಕ್ಷನ್ 135 (C) ಹಾಗೂ 1967ರ ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 10 (B) ಅಡಿಯಲ್ಲಿಯೇ ಈ ನಿರ್ಬಂಧ ಜಾರಿಗೆ ತರಲಾಗುವುದು ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರು ಕೆ. ಎ. ದಯಾನಂದ ಅವರು ಮಾಹಿತಿ ತಿಳಿಸಿದ್ದಾರೆ.

ಈ ಚುನಾವಣೆಯ ಮತದಾನ ಪ್ರಕ್ರಿಯೆ ಬೆಂಗಳೂರು ನಗರ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಮತದಾರರು ಕೂಡ ಭಾಗಿಯಾಗಲಿದ್ದಾರೆ. ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಕ್ಷೇತ್ರದ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಹೀಗಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಫೆ 23ರವರೆಗೂ ಜಾರಿಯಲ್ಲಿರಲಿದೆ. ಮದ್ಯ ಮಾರಾಟ ನಿರ್ಬಂಧ ಕೂಡಾ ಈ ಕ್ಷೇತ್ರದಲ್ಲಿ ಜಾರಿಯಲ್ಲಿರಲಿದೆ.