Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ..! ಈ ಮಹಿಳೆಯರಿಗೆ ಹಣ ಇಲ್ಲ ನೋಡಿ !

6ನೇ ಕಂತಿನ ಹಣ ಬಿಡುಗಡೆ :

ಫೆಬ್ರವರಿ 8 2024ರಂದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿರುವುದರ ಬಗ್ಗೆ ಯಾವುದೇ ರೀತಿಯ ಸಂಶಯವಿಲ್ಲ ಹಾಗೂ ಎಲ್ಲಾ ಫಲಾನುಭವಿಗಳಿಗೆ ಹಣ ಜಮಾ ಮಾಡಲು ಕೆಲವು ದಿನಗಳು ಹಿಡಿಯುತ್ತದೆ.

ಆರನೇ ಕಂತಿನ ಹಣವನ್ನು 5 ಲಕ್ಷ ಜನರಿಗೆ ಮಾತ್ರ ಜನ ಮಾಡಲಾಗಿದೆ ಇನ್ನು ಉಳಿದಂತಹ ಹಣವನ್ನು ಉಳಿದ ಫಲಾನುಭವಿಗಳಿಗೆ ಜಮಾ ಮಾಡಲಾಗುತ್ತದೆ. ಪ್ರತಿಯೊಂದು ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುತ್ತದೆ. ಈ ಜಿಲ್ಲೆಗೆ ಮಾತ್ರ ಸೀಮಿತ ಎನ್ನುವಂತೆ ಯಾವುದೇ ರೀತಿಯ ಹೊಸ ನಿಯಮಗಳು ಸಹ ಸರ್ಕಾರದಿಂದ ಜಾರಿಯಾಗಿಲ್ಲ ಆರನೇ ಕಂತಿನ ಹಣ ಫೆಬ್ರವರಿ ಕೊನೆಯ ವಾರದೊಳಗೆ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ಜಮಾ ಆಗುತ್ತದೆ.

ಜಮಾ ಆಗಿರುವುದರ ಮಾಹಿತಿ ತಿಳಿದುಕೊಳ್ಳುವ ವಿಧಾನ :

ಸಾಕಷ್ಟು ಜನರಿಗೆ ಗೊಂದಲದ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದರೆ ಫಲಾನುಭವಿಗಳಿಗೆ ಯಾವುದೇ ರೀತಿಯ ಮಾಹಿತಿ ಬರದೆ ಇರುವುದಾಗಿದೆ ಆದ್ದರಿಂದ ಸರಿಯಾಗಿ ಹಣ ಬಂದಿದೆಯೇ ಇಲ್ಲವೇ ಎಂಬುದು ಹಾಗೂ ಬಂದಿದ್ದರು ಕೂಡ ಅವರಿಗೆ ಯಾವ ಸರಿಯಾಗಿ ತಿಳಿಯುತ್ತಿಲ್ಲ. ಪಾಸ್ ಬುಕ್ ಎಂಟ್ರಿ ಮಾಡಿಸಿದ ನಂತರ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ತಿಳಿದು ಬರುತ್ತಿದೆ

ಅದೇ ರೀತಿ ಪಾಸ್ ಬುಕ್ ಅನ್ನು ಬ್ಯಾಂಕಿಗೆ ಹೋಗಿ ಎಂಟ್ರಿ ಮಾಡಿಸಬೇಕು. ಲಕ್ಷ್ಮಿ ಯೋಜನೆಯ ಹಣ ಡಿ ಬಿ ಟಿ ಮೂಲಕ ಜಮಾ ಆಗುತ್ತದೆ ಆದ್ದರಿಂದ ಫಲಾನುಭವಿಗಳು ಬ್ಯಾಂಕ್ ರಜೆ ದಿನ ಇದ್ದರೂ ಕೂಡ ಜಮಾ ಆಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ ಹಾಗಾಗಿ ಯಾವಾಗ ಬೇಕಾದರೂ ಡಿಬಿಟಿ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಹೇಳಲಾಗಿದೆ.

ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯು ಯಶಸ್ವಿ ಆರು ತಿಂಗಳನ್ನು ಪೂರೈಸಿದ್ದು ರಾಜ್ಯ ಸರ್ಕಾರವು ಒಟ್ಟು ಆರು ತಿಂಗಳ ಹಣವನ್ನು ರಾಜ್ಯದಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ. ಹಾಗಾಗಿ ನಿಮಗೆ ತಿಳಿದಿರುವ ಯಾರಾದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 6ನೇ ಕoತಿಯ ಹಣವನ್ನು ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿ ಧನ್ಯವಾದಗಳು.