Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾರ್ಚ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡ್ಲೇಬೇಕು..!

ಗೃಹಲಕ್ಷ್ಮಿ ಯೋಜನೆಯು ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಲಾದ ಯೋಜನೆಯಾಗಿದ್ದು, ಅನೇಕ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿರುವುದು ನಿಜ.

ಸರ್ಕಾರ ಈಗಾಗಲೇ ಐದು ಕಂತುಗಳನ್ನು ಬಿಡುಗಡೆ ಮಾಡಿದೆ. ಅಂದರೆ ಮಹಿಳೆಯರಿಗೆ 10 ಸಾವಿರ ರೂ. ಈ ನಡುವೆ ಇದುವರೆಗೆ ಒಂದು ಕಂತಿನ ಹಣ ಬಿಡುಗಡೆಯಾಗಿ ಮುಂದಿನ ಕಂತಿನ ಹಣ ಬಿಡುಗಡೆಯಾಗದೆ, ಅಥವಾ ಅರ್ಜಿ ಸಲ್ಲಿಸಿ ಒಂದು ರೂಪಾಯಿಯೂ ಖಾತೆಗೆ ಜಮೆಯಾಗದ (ಹಣ ಠೇವಣಿ) ಅನೇಕ ಮಹಿಳೆಯರು ಇದ್ದಾರೆ. )

ಗೃಹಲಕ್ಷ್ಮಿ ಹಣವನ್ನು ಯಾಕೆ ಹಾಕಿಲ್ಲ

  • ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ
  • ರೇಷನ್ ಕಾರ್ಡ್ ಅಪ್ಡೇಟ್ ಆಗಿಲ್ಲ
  • NPCI ಆಗಿಲ್ಲ
  • ತಾಂತ್ರಿಕ ದೋಷಗಳು ಕಾರಣ.

ಈ ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ! ಕೂಡಲೇ ಮಾಡಿ.

ನೀವು ಬ್ಯಾಂಕ್‌ಗೆ ಹೋಗಿ NPC ಲಿಂಕ್ ಪಡೆಯಬಹುದು. ಅದೇ ರೀತಿ ನೀವು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೆ, ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ನೀವು ತಕ್ಷಣ ಮಕ್ಕಳ ಅಭಿವೃದ್ಧಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು ಮತ್ತು ನಿಮ್ಮ ಹೆಸರನ್ನು ತೆಗೆದುಹಾಕಬಹುದು.

ಇವೆಲ್ಲವನ್ನೂ ಹೊರತುಪಡಿಸಿ, ನಿಮ್ಮ  ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿಯ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಪುರಾವೆಗಳನ್ನು ತೆಗೆದುಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಖಾತೆಗೆ ಹಣ ಏಕೆ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ಪರಿಶೀಲಿಸಿ. ಆಗ ನೀವು ಅದಕ್ಕೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಸಮಸ್ಯೆ ಎಲ್ಲಿದೆ ಎಂದು ತಿಳಿಯದೆ ಪರಿಹಾರ ಹುಡುಕಿದರೆ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಹಾಗಾಗಿ ಮೊದಲು ಈ ಕೆಲಸ ಮಾಡಿ ನಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಆರನೇ ಕಂತಿನ ಹಣವೂ ಬಿಡುಗಡೆಯಾಗಲಿದ್ದು, ಶೀಘ್ರವೇ ನಿಮ್ಮ ಖಾತೆಯಲ್ಲಿನ ಸಮಸ್ಯೆ ಬಗೆಹರಿಸಿಕೊಂಡರೆ ನಿಮ್ಮ ಖಾತೆಗೆ ತಪ್ಪದೇ ಹಣ ಬರಲಿದೆ.