Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಟೈರ್ ಸ್ಫೋಟ ಸ್ಥಳದಲ್ಲಿ ಮೂವರು ಸಾವು.! ಹಲವರಿಗೆ ಗಾಯ.!

 

ದಾವಣಗೆರೆ : ದಾವಣಗೆರೆ ನಗರದ ಹೊರವಲಯದಲ್ಲಿರುವ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಟೈರ್ ಸ್ಫೋಟಗೊಂಡು ಬೋಲೆರೋ ವಾಹನ ಒಂದು ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ದು 6 ಜನರಿಗೆ ಗಾಯವಾಗಿರುವ ದುರ್ಘಟನೆ ಸಂಭವಿಸಿದೆ.

ದಾವಣಗೆರೆ ನಗರದ ಹೊರವಲಯದಲ್ಲಿ ತಡರಾತ್ರಿ ಈ ಒಂದು ಅಪಘಾತ ನಡೆದಿದೆ. ಘಟನೆಯಲ್ಲಿ ಬುಲೆರೋ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತಪಟ್ಟವರೆಲ್ಲರೂ ಆಂಧ್ರ ಮೂಲದವರೆಂದು ಹೇಳಲಾಗುತ್ತಿದೆ.ಗಾಯಾಳುಗಳ ಪೈಕಿ  ಐದು ಜನರಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು  ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು ಆತನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರು ಆಂಧ್ರ ಮೂಲದವರೆಂದು ಎಂದು ಹೇಳಲಾಗುತ್ತಿದೆ. ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಸಿಂಗರಾಜನಹಳ್ಳಿ ನಿವಾಸಿಗಳು ಎಂದು ಹೇಳಲಾಗುತ್ತಿದೆ ಹಾವೇರಿ ಜಿಲ್ಲೆ ಬ್ಯಾಡಿಗೆಯಿಂದ ಮೆಣಸಿನಕಾಯಿ ಖರೀದಿಗೆ ಊರಿಗೆ ತೆರಳಿ ವಾಪಸ್ ಬರುವ ಸಂಪತ್ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ದಾವಣಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.