Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಖದ ಕಾಂತಿ ಹೆಚ್ಚಿಸಲು ಹುಣಸೆ ಹಣ್ಣಿನ ನೀರನ್ನು ಹಚ್ಚಿ

ಹುಣಸೆ ಹಣ್ಣನ್ನು ನಾವು ಅಡುಗೆಗೆ ಬಳಸುತ್ತೇವೆ. ಅದರ ಹುಳಿ ರುಚಿಯನ್ನು ಹೆಚ್ಚಿನವರು ಇಷ್ಟ ಪಡುತ್ತಾರೆ. ಮಕ್ಕಳಂತೂ ಅದನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಹುಣಸೆ ಹಣ್ಣಿನ ರಸವನ್ನು ಕುಡಿಯುವುದರಿಂದ ಚರ್ಮಕ್ಕೆ ಲಾಭಗಳಿವೆ. ನಿಮಗೆ ಹುಣಸೆ ರಸ ಕುಡಿಯಲು ಇಷ್ಟವಾಗದಿದ್ದರೆ ನೀವು ಅದನ್ನು ಮುಖಕ್ಕೂ ಹಚ್ಚಬಹುದು. ಹುಣಸೆ ಹಣ್ಣಿನ ಪೋಷಕಾಂಶಗಳುಜೀವಸತ್ವಗಳು, ಕಬ್ಬಿಣ, ಪೊಟ್ಯಾಸಿಯಮ್, ಖನಿಜಗಳು ಮತ್ತು ಫೈಬ‌ರ್ ಹುಣಸೆ ಹಣ್ಣಿನಲ್ಲಿವೆ. ಇದರೊಂದಿಗೆ ಹುಣಸೆಹಣ್ಣಿನಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಅಸ್ತಮಾ ವಿರೋಧಿ ಗುಣಗಳಿದ್ದು, ಇದು ದೇಹವನ್ನು ಹಲವು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಬ್ಬಿಣದ ಸಮೃದ್ಧಿಯಿಂದಾಗಿ, ಹುಣಸೆಹಣ್ಣು ರಕ್ತದ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಮುಖದಲ್ಲಿನ ಕಲೆಯನ್ನು ಕಡಿಮೆ ಮಾಡುತ್ತದೆಹುಣಸೆಹಣ್ಣಿನ ತಿರುಳು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುತ್ತದೆ, ಅವುಗಳು ತಮ್ಮ ಎಪ್ಪೋಲಿಯೇಟಿಂಗ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಅವು ಚರ್ಮದಲ್ಲಿನ ರಂಧ್ರಗಳನ್ನು ಮುಚ್ಚಿಕೊಳ್ಳಲು ಸಹಕರಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಲೆಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ. ಚರ್ಮದ ಹೊಳಪು ಹೆಚ್ಚುತ್ತದೆ.ಹುಣಸೆ ಹಣ್ಣಿನ ತಿರುಳನ್ನು ಅರಿಶಿನದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.30 ಗ್ರಾಂ ಹುಣಸೆಹಣ್ಣನ್ನು 100 ಮಿಲಿ ನೀರಿನಲ್ಲಿ ಕುದಿಸಿ ಮತ್ತು ಅದರಿಂದ ತಿರುಳನ್ನು ಹೊರತೆಗೆಯಿರಿ. ತಿರುಳಿಗೆ ಅರ್ಧ ಚಮಚ ಅರಿಶಿನ ಸೇರಿಸಿ ಫೇಸ್‌ಪ್ಯಾಕ್‌ನ್ನು ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿ ಮುಖ ಒಣಗಿದ ನಂತರ ಮುಖ ತೊಳೆಯಿರಿ. ಹುಣಸೆ ಹಣ್ಣಿನ ರಸ ತಯಾರಿಸುವುದು ಹೇಗೆ?ಹುಣಸೆ ಹಣ್ಣಿನ ರಸವನ್ನು ತಯಾರಿಸಲು, ಮೊದಲು ಹುಣಸೆಹಣ್ಣನ್ನು ಚೆನ್ನಾಗಿ ತೊಳೆಯಿರಿ. ಈಗ ಹುಣಸೆಹಣ್ಣಿನಿಂದ ಎಲ್ಲಾ ಬೀಜಗಳನ್ನು ಹೊರತೆಗೆಯಿರಿ. ಇದರ ನಂತರ, ಹುಣಸೆಹಣ್ಣನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ.ಇದರ ನಂತರ, ಹುಣಸೆಹಣ್ಣಿನ ನೀರನ್ನು ಒಂದು ಜರಡಿ ಮೂಲಕ ಫಿಲ್ಟರ್ ಮಾಡಿ ಇದರ ನಂತರ ಜೇನುತುಪ್ಪ ಮತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ. ನಿಮಗೆ ಸಿಹಿ ಇಷ್ಟವಿಲ್ಲದಿದ್ದರೆ, ಹುಣಸೆ ಹಣ್ಣಿನ ರಸ ಮತ್ತು ನೀರಿಗೆ ಕಪ್ಪು ಉಪ್ಪನ್ನು ಸೇರಿಸಿ ಕುಡಿಯಬಹುದು. ಮುಖದ ಮೇಲೆ ಹುಣಸೆ ಹಣ್ಣಿನ ರಸವನ್ನು ಹಚ್ಚುವುದು ಹೇಗೆ ?ಹುಣಸೆ ಹಣ್ಣಿನ ರಸದ ರುಚಿ ನಿಮಗೆ ಕುಡಿಯಲು ಇಷ್ಟವಾಗದಿದ್ದರೆ, ನೀವು ಅದನ್ನು ಮುಖಕ್ಕೆ ಹಚ್ಚಬಹುದು. ಇದಕ್ಕಾಗಿ ಹುಣಸೆ ಹಣ್ಣಿನ ರಸವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ನೀವು ನಿಮ್ಮ ಸಾಮಾನ್ಯ ಫೇಸ್ ಪ್ಯಾಕ್ ಅಥವಾ ಫೇಸ್ ಸ್ಟ್ರಬ್‌ಗೆ ಹುಣಸೆ ಹಣ್ಣಿನ ರಸವನ್ನು ಕೂಡ ಸೇರಿಸಬಹುದು.