Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅನಾರೋಗ್ಯದಿಂದ ದೂರವಿರಲು ಪ್ರತಿದಿನ ಸೇವನೆ ಮಾಡಿ ʼತುಳಸಿʼ ಟೀ

ತುಳಸಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ತುಳಸಿಯನ್ನು ಹಾಗೇ ಸೇವನೆ ಮಾಡದೆ ಅದನ್ನು ಚಹಾ ರೀತಿಯಲ್ಲಿ ಸೇವನೆ ಮಾಡುವುದು ಹೆಚ್ಚು ಉಪಯುಕ್ತ. ತುಳಸಿಯಲ್ಲಿ ಆಂಟಿವೈರಸ್, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ, ವಿಟಮಿನ್ ಎ, ವಿಟಮಿನ್ ಸಿ, ರಂಜಕ, ಕ್ಯಾಲ್ಸಿಯಂ ಮುಂತಾದ ಪ್ರಮುಖ ಅಂಶಗಳಿವೆ. ಅನೇಕ ಅನಾರೋಗ್ಯಕ್ಕೆ ಇದು ಪರಿಹಾರ ನೀಡುತ್ತದೆ. ತುಳಸಿ ಟೀ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬಿಪಿ ಸಮಸ್ಯೆಯಿರುವವರು ತುಳಸಿ ಚಹಾ ಸೇವನೆ ಮಾಡುವುದು ಒಳ್ಳೆಯದು. ತುಳಸಿಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ ಎಂದು ನಂಬಲಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಜೀರ್ಣಕ್ರಿಯೆಗೂ ತುಳಸಿ ಹೆಚ್ಚು ಪ್ರಯೋಜನಕಾರಿ. ಜನರು ತಪ್ಪು ಆಹಾರ ಪದ್ಧತಿ ಜೀರ್ಣಕ್ರಿಯೆಗೆ ಅಡ್ಡಿಯಾಗ್ತಿದೆ. ತುಳಸಿ ಚಹಾ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮಲವಿಸರ್ಜನೆ ಪ್ರಕ್ರಿಯೆ ಸುಲಭವಾಗುವುದಲ್ಲದೆ ಗ್ಯಾಸ್ ಸಮಸ್ಯೆ, ಭೇದಿ ಸಮಸ್ಯೆ, ಹೊಟ್ಟೆ ಸೆಳೆತ ಸಮಸ್ಯೆ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. . ಉತ್ತಮ ನಿದ್ರೆಗಾಗಿ ತುಳಸಿಯು ನಿಮಗೆ ತುಂಬಾ ಉಪಯುಕ್ತವಾಗಿದೆ. ಅನೇಕ ಕಾರಣಗಳಿಂದ ಜನರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆ ಇಲ್ಲದೆ ಹೋದ್ರೆ ಮತ್ತೊಂದಿಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಸರಿಯಾಗಿ ನಿದ್ರೆ ಬರಬೇಕೆಂದ್ರೆ ತುಳಸಿ ಟೀ ಸೇವನೆ ಮಾಡುವುದು ಒಳ್ಳೆಯದು.