Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಳೆದಿಂಡಿನಿಂದ ಏನೆಲ್ಲಾ ಆರೋಗ್ಯ ಪ್ರಯೋಜನ ಇದೆ ಗೊತ್ತಾ…?

ಬಾಳೆದಿಂಡು ತಿಂದ್ರೆ ಸಣ್ಣಗಾಗ್ತಾರೆ ಅಂತಿದೆ ವಿಜ್ಞಾನ, ಡಯಾಬಿಟಿಸ್‌ಗೂ ಇದು ರಾಮಬಾಣವಂತೆ ! ಮಧುಮೇಹವನ್ನು ಹತೋಟಿಯಲ್ಲಿರಿಸಿ, ದೇಹತೂಕ ಇಳಿಸುವಲ್ಲಿ ಸಹಕಾರಿ ಎಂದು ಹೇಳಲಾಗಿದೆ. ಬಾಳೆಹಣ್ಣುಗಳನ್ನು ಎಲ್ಲರೂ ತಿನ್ನತ್ತಾರೆ.

ಇದು ಆರೋಗ್ಯಕ್ಕೆ ಉತ್ತಮವೆಂದು ಎಲ್ಲರಿಗೂ ಗೊತ್ತು, ಬಾಳೆ ಹಣ್ಣಿನಿಂದ ಏನೇನೋ ಖಾದ್ಯಗಳನ್ನುತಯಾರಿಸುತ್ತಾರೆ, ರಸಾಯನ ಮಾಡುತ್ತಾರೆ, ಪಾಯಸ ಮಾಡುತ್ತಾರೆ, ಹಲ್ವ ಮಾಡುತ್ತಾರೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ, ಆದರೆ. ಬಾಳೆದಿಂಡಿನಲ್ಲಿ ಇರುವ ಅದ್ಭುತ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಬಾಳೆ ಗೊನೆಯನ್ನು ಕಡಿದ ಬಳಿಕ ಬಾಳೆ ಗಿಡದ ತಿರುಳುಗಳನ್ನು ತೆಗೆಯುತ್ತಾ ಹೋದಂತೆ ಕೊನೆಯಲ್ಲಿ ಒಂದು ಎಳತಾದ ದಿಂಡು ಸಿಗುತ್ತದೆ. ಈ ದಿಂಡಿನ ರಸವನ್ನು ಕುಡಿದರೆ ಅತ್ಯಂತ ಪರಿಣಾಮಕಾರಿ ಔಷಧೀಯ ಗುಣ ಇದರಲ್ಲಿದೆ. ಕಿಡ್ನಿ ಸ್ಟೋನ್ ಅನ್ನು ತೆಗೆದುಹಾಕುತ್ತದೆ – ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಅಂಶಗಳು ಅಥವಾ ಯೂರಿಕ್ ಆಮ್ಲದಿಂದಾಗಿ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತದೆ.

ಬಾಳೆದಿಂಡು ಮೂತ್ರಪಿಂಡಗಳಲ್ಲಿ ರೂಪುಗೊಂಡ ಕಲ್ಲುಗಳನ್ನು ವಿಭಜಿಸುವ ಮೂತ್ರವರ್ಧಕ ಮತ್ತು ಪೊಟ್ಯಾಸಿಯಮ್ ಅಂಶವನ್ನು ಹೊಂದಿರುತ್ತದೆ. ಬಾಳೆದಿಂಡಿನ ರಸವು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಪರಿಣಾಮಕಾರಿಯಾಗಿದೆ.

ಉತ್ತಮ ಫಲಿತಾಂಶಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು . ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲನ್ನು ಸುಲಭವಾಗಿ ತೆಗೆದುಹಾಕಲು ನೆರವಾಗುತ್ತದೆ. ಮೂತ್ರದ ಸೋಂಕನ್ನು ದೂರವಿರಿಸುತ್ತದೆ – ಬಾಳೆ ದಿಂಡು ಮೂತ್ರದ ಸೋಂಕನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಬಿ 6 ಎಂಬ ಪೋಷಕಾಂಶಗಳು ಮೂತ್ರನಾಳದಲ್ಲಿ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ತಕ್ಷಣದ ಪರಿಹಾರ ಪಡೆಯಲು ಸೋಂಕಿನ ಸಮಯದಲ್ಲಿ ಬಾಳೆ ದಿಂಡಿನ ಜ್ಯೂಸ್ ಮಾಡಿ ಕುಡಿಯಿರಿ ಅಥವಾ ಇತರ ಪದಾರ್ಥಗಳೊಂದಿಗೆ ನಿಯಮಿತವಾಗಿ ಬೇಯಿಸಿ ಸೇವಿಸಿ.

ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ – ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ. ಬಾಳೆ ದಿಂಡಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿ ಕಡಿಮೆ. ಮಧುಮೇಹ ಜನರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದನ್ನು ಶಿಫಾರಸು ಮಾಡಲಾಗಿದೆ. ಮಲಬದ್ಧತೆಯನ್ನು ನಿವಾರಿಸುತ್ತದೆ – ಬಾಳೆದಿಂಡಿನಲ್ಲಿ ಫೈಬರ್ ಅಧಿಕವಾಗಿದ್ದು, ಮಲಬದ್ಧತೆ ಸುಲಭವಾಗಿ ನಿವಾರಣೆಯಾಗುತ್ತದೆ.