Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪದೇ ಪದೇ ಹಸಿವಾಗಲು ಕಾರಣಗಳು ಹೀಗಿವೆ

ಹಸಿವು ಶರೀರದ ಕಾರ್ಯ ನಿರ್ವಹಣೆಗೆ ಆಹಾರದ ಅಗತ್ಯವನ್ನು ಸೂಚಿಸುವ ನೈಸರ್ಗಿಕ ಸಂಕೇತವಾಗಿದೆ. ಹಸಿವು ಎಲ್ಲರಲ್ಲಿಯೂ ಒಂದೇ ರೀತಿಯಲ್ಲಿರುವುದಿಲ್ಲ.

ಕೆಲವರು ಬಹು ಹೊತ್ತಿನವರೆಗೂ ಆಹಾರವಿಲ್ಲದೆ ಕಳೆಯಬಲ್ಲರು,ಇನ್ನು ಕೆಲವರಿಗೆ ಪದೇ ಪದೇ ಹಸಿವೆಯಾಗುತ್ತಲೇ ಇರುತ್ತದೆ. ಹೀಗೆ ಪದೇ ಪದೇ ಹಸಿವೆಯಾಗುವುದಕ್ಕೆ ನಿರ್ಜಲೀಕರಣ,ಪ್ರೋಟಿನ್,ನಾರು ಅಥವಾ ಕೊಬ್ಬಿನ ಕೊರತೆ,ಕಡಿಮೆ ನಿದ್ರೆ ಇತ್ಯಾದಿಗಳು ಕಾರಣವಾಗುತ್ತವೆ. ಪ್ರೋಟಿನ್ ನಮ್ಮ ಶರೀರಕ್ಕೆ ಅಗತ್ಯ ಪೋಷಕಾಂಶಗಳಲ್ಲೊಂದಾಗಿದೆ. ಅದು ಹಸಿವನ್ನು ತಗ್ಗಿಸುವ ಗುಣವನ್ನು ಹೊಂದಿದೆ.

ನಾವು ಕೆಲವೇ ಕ್ಯಾಲರಿಗಳನ್ನು ಸೇವಿಸುವಂತೆ ಮಾಡುತ್ತದೆ. ಅದು ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುವ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ಪ್ರಚೋದಿಸುವ ಹಾರ್ಮೋನ್‌ಗಳ ಉತ್ಪಾದನೆಯನ್ನು ತಗ್ಗಿಸುತ್ತದೆ. ಪ್ರೋಟಿನ್‌ಗೆ ಹಸಿವಿನ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಶಕ್ತಿಯಿರುವುದರಿಂದ ಅದರ ಕೊರತೆಯು ಪದೇ ಪದೇ ಹಸಿವಿಗೆ ಕಾರಣವಾಗಬಹುದು. ದೇಹದಲ್ಲಿನ ಡಿಹೈಡ್ರೆಶನ್ ನಿಂದ ನಿಮಗೆ ಹಸಿವಾಗುತ್ತಿದೆ ಎಂಬ ಭಾವನೆ ಮೂಡುತ್ತದೆ.

ಪ್ರತಿದಿನ 6-8 ಗ್ಲಾಸ್ ನೀರು ಕುಡಿಯಿರಿ. ತಿಂಡಿ ತಿನ್ನಲು ಧಾವಿಸುವ ಮುನ್ನ ನಿಮಗೆ ಬಾಯಾರಿಕೆ ಆಗಿದೆಯೇ ಅನ್ನೋದನ್ನು ಗಮನಿಸಿ.ಅಗತ್ಯವಿರುವಷ್ಟು ನಿದ್ದೆಯಾಗದೇ ಇದ್ದಲ್ಲಿ ನಿಮಗೆ ಪದೇ ಪದೇ ಏನನ್ನಾದರೂ ತಿನ್ನಬೇಕು ಎನಿಸುತ್ತದೆ. ಇದಕ್ಕೆ ಕಾರಣ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನ್ ಗಳು. ಹೊಟ್ಟೆ ತುಂಬಿದೆ ಅನ್ನೋದನ್ನು ಲೆಪ್ಟಿನ್ ತಿಳಿಸುತ್ತದೆ.

ಸರಿಯಾಗಿ ನಿದ್ದೆ ಮಾಡದೇ ಇದ್ದಾಗ ಲೆಪ್ಟಿನ್ ಕಾರ್ಯ ನಿರ್ವಹಿಸುವುದಿಲ್ಲ. ಇದು ಮಧುಮೇಹದ ಲಕ್ಷಣ ಕೂಢ ಆಗಿರಬಹುದು, ಏಕೆಂದರೆ ತೀವ್ರವಾದ ಹಸಿವು ಕೂಡ ಮಧುಮೇಹಕ್ಕೆ ಕಾರಣವಾಗಬಹುದು. ಇದರ ಪರಿಣಾಮ ತೂಕವನ್ನು ಕಳೆದುಕೊಳ್ಳುವುದು, ಹೆಚ್ಚು ಮೂತ್ರ ವಿಸರ್ಜಿಸುವುದು, ಹೆಚ್ಚು ಸುಸ್ತಾಗಬಹುದು. ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆ ಹೊಂದಿದ್ದರು ಕೂಡ ಹಸಿವು ಹೆಚ್ಚಾಗುತ್ತದೆ. ಇದರರ್ಥ ನಿಮ್ಮ ರಕ್ತದಲ್ಲಿ ಸಾಕಷ್ಟು ಗ್ಲುಕೋಸ್ ಇಲ್ಲ.

ಇದು ನೀವು ಸುಸ್ತಾದಂತೆ, ದುರ್ಬಲ ಅಥವಾ ತಲೆ ತಿರುಗುವಂತೆ ಮಾಡುತ್ತದೆ. ನೀವು ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ತಿನ್ನುತ್ತಿದ್ದರೆ ಇದು ಸಂಭವಿಸಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಕಣ್ಣಿಡಲು ರಕ್ತ ಪರೀಕ್ಷೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡಬಹುದು.