Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಣ್ಣಿನ ಆರೋಗ್ಯಕ್ಕೆ ಸೇವಿಸಿ ‘ಕರ್ಬೂಜ ಹಣ್ಣು’

ಕರ್ಬೂಜ ಹಣ್ಣು ಅಷ್ಟೊಂದು ಸಿಹಿಕರ ಹಣ್ಣಲ್ಲ. ಆದರೆ ಅದರಲ್ಲಿರುವ ವಿಟಮಿನ್ ಎ ಶ್ವಾಸಕೋಶಗಳ ಆರೋಗ್ಯಕ್ಕೆ ಅತ್ಯುತ್ತಮವಾದ ಔಷಧಿ. ಆದ ಕಾರಣ ಪ್ರತಿ ದಿನ ಒಂದು ಬಟ್ಟಲು ಪ್ರಮಾಣದಲ್ಲಿ ಈ ಹಣ್ಣಿನ ಸೇವನೆ ಮಾಡಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ಎ ದೊರಕುತ್ತದೆ.

ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಉತ್ತಮ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ರೆಟಿನಾ ನರವ್ಯೂಹಗಳ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಅಷ್ಟೇ ಅಲ್ಲದೇ. ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಸಹ ಹೆಚ್ಚಾಗಿಯೇ ಇದೆ.

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ ಬಿಪಿಯನ್ನು ಕಡಿಮೆ ಮಾಡುತ್ತದೆ. ಸದಾ ಸ್ನಾಯುಗಳು ಹಿಡಿದಂತಾಗುವ ಸಮಸ್ಯೆ ಎದುರಿಸುತ್ತಿರುವವರು ಈ ಹಣ್ಣನ್ನು ಸೇವಿಸಬಹುದು.

ಈ ಹಣ್ಣಿನ ರಸ ಸೇವಿಸಿದರೆ ಆಮ್ಲಜನಕದ ಸರಬರಾಜು ಮೆದುಳಿಗೆ ಸುಗಮವಾಗಿ ಸಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಸುಖ ನಿದ್ರೆಯನ್ನು ಹೊಂದಬಹುದು. ಇದರಲ್ಲಿರುವ ಬೀಜವನ್ನು ತಿಂದರೆ ಹೊಟ್ಟೆ ಶುಭ್ರಗೊಳ್ಳುತ್ತದೆ.

ಕೆಮ್ಮು ಜ್ವರ, ಅಜೀರ್ಣ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. * ಇದರಲ್ಲಿರುವ ಫೋಲಿಕ್ ಆಮ್ಲವು ಗರ್ಭಿಣಿಯರ ಆರೋಗ್ಯವನ್ನು ಕಾಪಾಡುತ್ತದೆ.