Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಅಪೋಲೋ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ – ಶ್ರೀರಾಮನ ಭಕ್ತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ

ಅಯೋಧ್ಯೆ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಯಾತ್ರಾಸ್ಥಳದಲ್ಲಿ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ ಪ್ರಾರಂಭಿಸಿ ಉಚಿತ ಚಿಕಿತ್ಸೆ ನೀಡೋದಾಗಿ ಘೋಷಿಸಿದೆ. ಕೇಂದ್ರದ ಸುಧಾರಿತ ಸೇವೆಗಳ ಕುರಿತು ಮಾತನಾಡಿದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಧ್ಯಕ್ಷ ಡಾ.ಪ್ರತಾಪ್ ಸಿ.ರೆಡ್ಡಿ, ಕೇಂದ್ರದಲ್ಲಿ ವ್ಯಾಪಕವಾದ ಉತ್ತಮ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ. ಇವುಗಳಲ್ಲಿ ಪ್ರಾಥಮಿಕ ಪ್ರಥಮ ಚಿಕಿತ್ಸೆಯಿಂದ ಹಿಡಿದು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ವೈದ್ಯಕೀಯ ತುರ್ತು ಸೇವೆಗಳವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರವು 24×7 ಕ್ರಿಟಿಕಲ್ ಕೇರ್ ಸಪೋರ್ಟ್, ವಯಸ್ಕರು ಮತ್ತು ಮಕ್ಕಳಿಗಾಗಿ ಐಸಿಯು ಬ್ಯಾಕಪ್ ಅನ್ನು ಸಹ ಹೊಂದಿರುತ್ತದೆ. ಈ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಸರಿಸುಮಾರು 5,000 ಚದರ ಅಡಿ ಪ್ರದೇಶದಲ್ಲಿ ತುರ್ತು ವೈದ್ಯಕೀಯ ಕೇಂದ್ರವನ್ನು ನಿರ್ಮಿಸಲಾಗುವುದು. ಶ್ರೀರಾಮ ಲಲ್ಲಾನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೇಂದ್ರದಲ್ಲಿ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಲಕ್ನೋದ ಅಪೋಲೋ ಹಾಸ್ಪಿಟಲ್ಸ್ ಲಕ್ನೋದ ಎಂಡಿ ಮತ್ತು ಸಿಇಒ ಡಾ ಮಯಾಂಕ್ ಸೋಮಾನಿ ಮಾತನಾಡಿ, ಅಪೋಲೋ ಹಾಸ್ಪಿಟಲ್ಸ್ ಲಕ್ನೋ ನಡೆಸುತ್ತಿರುವ ಈ ಕೇಂದ್ರದ ಸೇವೆಗಳು ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಉಪಕ್ರಮವು ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಅಪೋಲೋ ಆಸ್ಪತ್ರೆಗಳ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.