Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

BREAKING : ರಾಜಸ್ಥಾನದಲ್ಲಿ ‘IAF’ ನ ತೇಜಸ್ ವಿಮಾನ ಪತನ, ಪೈಲಟ್ ಪಾರು..!

ಜೈಸಲ್ಮೇರ್‌ : ಭಾರತೀಯ ವಾಯುಪಡೆಯ ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಪಘಾತಕ್ಕೀಡಾಗಿದೆ. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿ ವೇಳೆ ಜೈಸಲ್ಮೇರ್ ಬಳಿ ಪತನವಾಗಿದೆ.

ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಮೊದಲ ಬಾರಿಗೆ ಲಘು ಯುದ್ಧ ವಿಮಾನ ತೇಜಸ್ ಅಪಘಾತವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ, ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.