Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊಸರನ್ನು ಬೆಳಿಗ್ಗೆ ಉಪಹಾರಕ್ಕೆ ಬಳಸಬಹುದೇ?

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬದು ಎಲ್ಲರಿಗೂ ತಿಳಿದೆ ಇದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು. ಆದರೆ ಈ ಮೊಸರನ್ನು ಬೆಳಿಗ್ಗೆ ಉಪಹಾರಕ್ಕೆ ಬಳಸಬಹುದೇ? ಅದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಮೊಸರಿನಲ್ಲಿ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಬೆಳಿಗ್ಗೆ ಉಪಹಾರಕ್ಕೆ ಮೊಸರನ್ನು ಬಳಸಿದರೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

*ಮೊಸರು ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುತ್ತದೆ.

*ಮೊಸರಿನಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇದೆ. ಇದು ಕೇವಲ 300 ಕ್ಯಾಲೋರಿಗಳನ್ನು ಹೊಂದಿದೆ. ಹಾಗಾಗಿ ಇದನ್ನು ಬೆಳಿಗ್ಗಿನ ಉಪಹಾರಕ್ಕೆ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲಬಹುದು.

*ದೇಹದಲ್ಲಿ ಕಬ್ಬಿಣದ ಕೊರತೆಯಿದ್ದಾಗ ಬೆಳಿಗ್ಗಿನ ಉಪಹಾರಕ್ಕೆ ಮೊಸರನ್ನು ಸೇವಿಸಿ. ಇದರಿಂದ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.

*ಮೊಸರು ದೇಹಕ್ಕೆ ತಂಪು ಅನುಭವ ನೀಡುವುದರಿಂದ ಇದರ ಸೇವನೆ ದಿನವಿಡೀ ಉಲ್ಲಾಸವಾಗಿರುವಲ್ಲಿ ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಮೊಸರು ಸೇವನೆ ಅವಶ್ಯವಾಗಿರಲಿ.