Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಇಂದು ಸಚಿವ ‘ದಿನೇಶ್ ಗುಂಡೂರಾವ್’ ಚಾಲನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯ ಸ್ತಂಭನ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ದಿ. ‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ.

ಮಾರ್ಚ್ 15ರ ಇಂದು ಧಾರವಾಡದ ಎಸ್‌ಡಿಎಂ ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಲಿದ್ದಾರೆ.

ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಘನ ಉಪಸ್ಥಿತಿ ಇರಲಿದೆ. ಅಭಿಮಾನಿಗಳ ಅಚ್ಚುಮೆಚ್ಚಿನ ಕರ್ನಾಟಕ ರತ್ನ ದಿ.ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಈ ಕುರಿತು ಪ್ರಕರಣಗಳು ಹೆಚ್ಚು ವರದಿ ಆಗುವುದು ಮುನ್ನೆಲೆ ಬಂತು.ಶೇ. 35ರಷ್ಟು ಹರೆಯದವರಲ್ಲಿ ಈ ಸಮಸ್ಯೆಅಧ್ಯಯನದ ಪ್ರಕಾರ ಹೃದಯ ಸ್ತಂಭನಕ್ಕೆ ಒಳಗದವರಲ್ಲಿ ಶೇ.35ರಷ್ಟು ಮಂದಿ 40 ವಯಸ್ಸಿನ ಆಸುಪಾಸಿನ ಹದಿಹರೆಯದವರೇ ಆಗಿದ್ದಾರೆ.

ಇನ್ನು ಕರ್ನಾಟಕದಾದ್ಯಂತ 71 ತಾಲ್ಲೂಕು ಹಾಗೂ 11 ಜಿಲ್ಲಾಸ್ಪತ್ರೆಗಳಲ್ಲಿ ‘ಸ್ಪೋಕ್’ ಕೇಂದ್ರಗಳ ಸ್ಥಾಪನೆ, ಉಚಿತ ECG ಪರೀಕ್ಷೆ, AI ತಂತ್ರಜ್ಞಾನ ನೆರವಿನಿಂದ ಶೀಘ್ರ ರೋಗ ನಿರ್ಣಯ. ಸ್ಪೋಕ್ ಆಸ್ಪತ್ರೆಗಳಲ್ಲಿ ತ್ವರಿತ ಚಿಕಿತ್ಸೆ ಹಾಗೂ ALS ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದು. ಹೃದಯಾಘಾತ ಚಿಕಿತ್ಸೆಗೆ ಸ್ಪೋಕ್ ಕೇಂದ್ರಗಳಲ್ಲಿ ₹30 ಸಾವಿರ ಮೌಲ್ಯದ ಟೆನೆಸ್ಟೆಪ್ಲೇಸ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತದೆ.