Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇಂದ್ರ ಸಚಿವ ಪಶುಪತಿ ಪರಾಸ್ ಸಚಿವ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ: ಎಲ್‌ಜೆಪಿ (ಪಶುಪತಿ) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಪಶುಪತಿ ಪರಾಸ್ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಎಲ್‌ ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಅಸಮಾಧಾನಗೊಂಡಿರುವ ಪಶುಪತಿ ಪರಾಸ್ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಚಿರಾಗ್ ಪಾಸ್ವಾನ್ ಅವರು ಹಾಜಿಪುರ ಲೋಕಸಭಾ ಕ್ಷೇ ತ್ರದಿಂದ ಸ್ಪರ್ಧಿ ಸಲಿದ್ದಾರೆ ಎಂ ದು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ರಾಜು ತಿವಾರಿ ಹೇಳಿದ್ದಾರೆ.ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದೆ. ಬಿಜೆಪಿ 17, ಜೆಡಿಯು16 ಮತ್ತು ಚಿರಾಗ್ಪಾಸ್ವಾನ್ ಅವರ  ಎಲ್‌ ಜೆಪಿ (ರಾಮ್ ವಿಲಾಸ್) ಐದು ಕ್ಷೇ ತ್ರಗಳಲ್ಲಿ ಸ್ಪರ್ಧಿಸಲಿವೆ.

ಎನ್‌ಡಿಎ ಭಾಗವಾಗಿರುವ ಮತ್ತೆರಡು ಮಿತ್ರಪಕ್ಷಗಳಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ ) ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋ ರ್ಹಾ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸಲಿವೆ ಎಂದು ಬಿಹಾರದ ಬಿಜೆಪಿ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ಹೇಳಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ರಾಜ್ಯದ ಒಟ್ಟು 40 ಲೋಕಸಭಾ ಕ್ಷೇ ತ್ರಗಳಲ್ಲಿ ಎನ್‌ಡಿಎ 39 ಕ್ಷೇ ತ್ರಗಳಲ್ಲಿ ಜಯಗಳಿಸಿತ್ತು.ಬಿಹಾರದಲ್ಲಿ ಎಲ್‌ಜೆಪಿ ಎರಡು ಬಣಗಳಾಗಿದೆ. ದಿ. ರಾಮ್ ವಿಲಾಸ್ ಪುತ್ರ ಚಿರಾಗ್ ಪಾಸ್ವಾನ್ ನೇತೃತ್ವದ ಒಂದು ಬಣ ಹಾಗೂ ದಿ.ರಾಮ್ ವಿಲಾಸ್  ಸಹೋದರ ಪಶುಪತಿ ಪರಾಸ್ ನೇತೃತ್ವದ ಮತ್ತೊಂದು ಬಣ.

ಪಶುಪತಿ ಪರಾಸ್ ನೇತೃತ್ವದ ಎಲ್‌ಜೆಪಿ ಈ ಹಿಂ ದೆ ಎನ್‌ಡಿಎ ಭಾಗವಾಗಿತ್ತು. ಆದ್ದರಿಂದ ಪಶುಪತಿ ಪರಾಸ್ ಕೇಂದ್ರ ಸಚಿವರಾಗಿದ್ದರು.ಇತ್ತೀಚೆಗೆ ಚಿರಾಗ್ ಪಾಸ್ವಾನ್ ಎನ್‌ಡಿಎ ಮೈತ್ರಿ ಕೂಟ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರಾಗ್ ಚಿಕ್ಕಪ್ಪ ಪಶುಪತಿ ಪರಾಸ್ ಕೋಪಗೊಂಡು ಎನ್‌ಡಿಎ ಮೈತ್ರಿಕೂಟ ತೊರೆದಿದ್ದಾರೆ.