Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ್ ಆಫರ್?

ಬೆಂಗಳೂರು: ಬಿಜೆಪಿ ಹಾಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ರಾಜಕೀಯ ನಡೆಯ ಇನ್ನು ನಿಗೂಢವಾಗಿದೆ ಇದೆ. ಬಿಜೆಪಿ ಹೈಕಮಾಂಡ್ ಕರೆ ಬಳಿಕ ಇಂದು ನಡೆಸಬೇಕಾಗಿದ್ದ ಪತ್ರಿಕಾಗೋಷ್ಟಿಯನ್ನು ಡಿ.ವಿ ಸದಾನಂದಗೌಡ ಮುಂದೂಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ರಾಜಕೀಯ ಕಾರಿಡಾರ್‌ಗಳಲ್ಲಿ ಕೇಳಿ ಬರುತ್ತಿದ್ದು, ಆದರೆ ಗೌಡರ ಸೇರ್ಪಡೆ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಪಿಸೋಡ್ ಮರುಕಳಿಸುವ ಭಯ ಸಿದ್ದರಾಮಯ್ಯಗೆ ಇದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಲು ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ನೊಂದೆಡೆ ಮುನಿಸಿಕೊಂಡಿರುವ ಸದಾನಂದಗೌಡರನ್ನು ದೆಹಲಿಯ ಬಿಜೆಪಿ ಮುಖಂಡರು ಗೌಡರನ್ನು ಸಂಪರ್ಕಿಸಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಮಾತ್ರವಲ್ಲದೇ ಮತ್ತೋರ್ವ ಒಕ್ಕಲಿಗ ನಾಯಕ ಬಚ್ಚೇಗೌಡ ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರದಿಂದ ಪಕ್ಷ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಮ್ಮ ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು. ಸದಾನಂದ ಗೌಡರು ಶಿಸ್ತಿನ ಸಿಪಾಯಿ.
ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್,ಪ್ರಕಟಣೆಯೊಂದನ್ನು ನೀಡಿದ್ದಾರೆ.

ಡಿವಿಎಸ್ ಸಂಘ ಪರಿವಾರದ ಸದಸ್ಯರು. ಅವರು ಕಾಂಗ್ರೆಸ್ ಇಂದ ಆಫರ್ ಬಂದಿದೆ ಎಂದಷ್ಟೇ ಹೇಳಿದ್ದು. ಆದರೆ ಸೇರುತ್ತೇನೆ ಎಂದು ಹೇಳಲೇ ಇಲ್ಲ’ ಎಂದು ಹೇಳಿದ್ದಾರೆ.ಮೋದಿ ಅಲೆಯನ್ನು ನೋಡಿ ಈಗಲೇ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸಲು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ’ ಎಂದು ತಿಳಿಸಿದ್ದರು.’ಸದಾನಂದ ಗೌಡರಂತೆ ನಿಷ್ಠಾವಂತ, ಶಿಸ್ತುಬದ್ದ ಕಾರ್ಯಕರ್ತ ಬಿಜೆಪಿಯಲ್ಲಿ ಯಾರು ಇಲ್ಲ. ಇವರೊಬ್ಬ ಸ್ಥಿತಪ್ರಜ್ಞ ರಾಜಕಾರಣಿ ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರಲಾರರು’ ಎಂದು ಎಸ್. ಹರೀಶ್ ಹೇಳಿದ್ದಾರೆ