Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಪಾಯಕಾರಿ ನಾಯಿ ತಳಿಗಳ ಮೇಲಿನ ನಿಷೇಧಕ್ಕೆ ಹೈಕೋರ್ಟ್‌ ತಡೆ

23 ಅಪಾಯಕಾರಿ ನಾಯಿ ತಳಿಗಳ ಆಮದು, ಮಾರಾಟ, ಸಂತಾನೋತ್ಪತ್ತಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್‌ ಕರ್ನಾಟಕಕ್ಕೆ ಸೀಮಿತವಾಗಿ ಮಧ್ಯಂತರ ತಡೆ ನೀಡಿದೆ. ಬೆಂಗಳೂರಿನ ಕಿಂಗ್‌ ಸೊಲೊಮನ್‌ ಡೇವಿಡ್‌& ಮರ್ಡೋನಾ ಜೋನ್ಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. M ನಾಗಪ್ರಸನ್ನ ಈ ಮಧ್ಯಂತರ ಆದೇಶ ನೀಡಿದ್ದಾರೆ. ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ
ಪರಿಗಣಿಸಿರುವ ಎಲ್ಲ ಅಂಶಗಳಿರುವ ದಾಖಲೆ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಕೇಂದ್ರ ಸರ್ಕಾರದ ಪರವಕೀಲರಿಗೆ ಸೂಚಿಸಿದೆ.