Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಗ್‌ ಬಾಸ್‌ ವಿಜೇತ ಮುನಾವರ್‌ ಘಾರೂಕಿ ಅರೆಸ್ಟ್‌..!

ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದು, ಬಿಗ್‌ ಬಾಸ್‌ 17ರ ವಿಜೇತ ಮುನಾವರ್‌ ಫಾರೂಕಿ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು.

ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ, ಮುಂಬೈ ಪೊಲೀಸ್‌ ಸಮಾಜ ಸೇವಾ ಶಾಖೆಯು ‘ಸಬಲನ್‌ ಹುಕ್ಕಾ ಬಾರ್‌’ ಮೇಲೆ ದಾಳಿ ನಡೆಸಿತ್ತು. ತಂಬಾಕು ಆಧಾರಿತ ಹುಕ್ಕಾ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗಿತ್ತು.

ಈ ಮಾಹಿತಿಯ ಮೇರೆಗೆ ನಮ್ಮ ತಂಡವು ದಾಳಿ ಮಾಡಿದೆ.