Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಯಾವ ರಾಜ್ಯ ಮೊದಲ ಸ್ಥಾನ.?

 

ದೆಹಲಿ: ಜಿಎಸ್ಟಿ ಸಂಗ್ರಹ ಏರಿಕೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2023ರ ಮಾರ್ಚ್ ಗೆ ಹೋಲಿಸಿದರೆ ಶೇಕಡ 26ರಷ್ಟು ಏರಿಕೆಯಾಗಿದೆ. 2024ರ ಮಾರ್ಚ್ ನಲ್ಲಿ ರಾಜ್ಯದಲ್ಲಿ ಒಟ್ಟಾರೆ 11,392 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಈ ಮೂಲಕ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರ ಎಂದಿನಂತೆ ಮೊದಲ ಸ್ಥಾನದಲ್ಲಿದ್ದು, 27.688 ಕೋಟಿ ರೂ. ಜಿ.ಎಸ್.ಟಿ. ಸಂಗ್ರಹವಾಗಿದೆ. ಕಳೆದ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

2023ರ ಮಾರ್ಚ್ ನಲ್ಲಿ ಕರ್ನಾಟಕ 10,360 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದ್ದು, ಕಳೆದ ಮಾರ್ಚ್ ನಲ್ಲಿ 13,014 ಕೋಟಿ ರೂ. ಜಿಎಸ್ಟಿ ಕಲೆಕ್ಷನ್ ಆಗಿ ಶೇಕಡ 26ರಷ್ಟು ಸಂಗ್ರಹ ಹೆಚ್ಚಳವಾಗಿದ್ದು, ಇದು ದೇಶದಲ್ಲಿ ಅತ್ಯಧಿಕವೆಂದು ಹೇಳಲಾಗಿದೆ.

ಇನ್ನು ಮಾರ್ಚ್ ತಿಂಗಳಲ್ಲಿ 1.78 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಕಳೆದ ವರ್ಷ ಇದೆ ಅವಧಿಗಿಂತ ಶೇಕಡ 11.5 ರಷ್ಟು ಹೆಚ್ಚಾಗಿದೆ. 2023ರ ಏಪ್ರಿಂನಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ 1.87 ನಂತರದ ಸ್ಥಾನದಲ್ಲಿದೆ