Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಳೆ ಏ.8 ರಂದು ನಡೆಯುವ ಸಂಪೂರ್ಣ ಸೂರ್ಯಗ್ರಹಣಕ್ಕೆ ಭಯ ಬೇಡ

 

ಚಿತ್ರದುರ್ಗ: ಇದೇ ಏಪ್ರಿಲ್ 8 ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣ ಜನರಲ್ಲಿ ಭಯ, ಆತಂಕ ಮೂಡಿಸಿದೆ. ವೈಜ್ಞಾನಿಕವಾಗಿ ಗ್ರಹಣವು ಬಾಹ್ಯಾಕಾಶದಲ್ಲಿ ನಡೆಯುವ ನೆರಳು ಬೆಳಕಿನ ಆಟವಷ್ಟೆ.!

ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ಸುತ್ತುವಾಗ ಈ ಮೂರು ಆಕಾಶಕಾಯಗಳು ಒಂದೇ ನೇರದಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತವೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣಗಳು ಸಂಭವಿಸುತ್ತವೆ. ಏಪ್ರಿಲ್ 8 ರಂದು ಅಮಾವಾಸ್ಯೆ ಯಂದು ನಡೆಯಲಿರುವ ಈ ಗ್ರಹಣವು ನಮ್ಮ ಭಾರತದಲ್ಲಿ  ಗೋಚರಿಸುವುದಿಲ್ಲ. ಕೇವಲ 8 ನಿಮಿಷಗಳ ಕಾಲ ಮದ್ಯಾಹ್ನದ ಸಮಯದಲ್ಲಿ ಅಂದರೆ ಭಾರತೀಯ ಕಾಲಮಾನ ಮಧ್ಯರಾತ್ರಿ 9.20 ರಿಂದ 1.25 ರವರೆಗೆ. ಅಲ್ಲಿ ಮದ್ಯಾಹ್ನ ಕತ್ತಲು ಆವರಿಸುವ ಈ-ಸಂಪೂರ್ಣ  ಸೂರ್ಯಗ್ರಹಣವನ್ನು ನೋಡಲು ಜನ ಕಾತರರಾಗಿದ್ದಾರೆ. ಇದು ಉತ್ತರ ಅಮೆರಿಕಾ, ಕೆನಡಾ, ಮೆಕ್ಸಿಕೊ ಮುಂತಾದ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಇದರಿಂದ ಯಾವುದೇ ರೀತಿಯ ಆತಂಕ, ಭಯ ಬೇಡ. ಗ್ರಹಣದ ಬಗ್ಗೆ ವೈಜ್ಞಾನಿಕ ಮನೋಭಾವದ ಅಗತ್ಯತೆ ಇದೆ ಅಷ್ಟೆ.

-ಎಚ್.ಎಸ್.ಟಿ ಸ್ವಾಮಿ

ಹ್ಯವಾಸಿ ಖಗೋಳ ವೀಕ್ಷಕ