Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಪರಿಹಾರ

ಕಿಡ್ನಿ ಮನುಷ್ಯನ ಬಹು ಮುಖ್ಯ ಅಂಗ. ಆದರೆ ಬದಲಾಗುತ್ತಿರುವ ಜೀವನಶೈಲಿ , ನೀರನ್ನು ಕಡಿಮೆ ಕುಡಿಯುವುದು ಈ ಎಲ್ಲಾ ಕಾರಣಗಳಿಂದ ಕಿಡ್ನಿ ಕಲ್ಲಿನ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಣ್ಣ ಪ್ರಮಾಣದ ಕಿಡ್ನಿ ಸ್ಟೋನ್​ಗಳಿದ್ದಾಗ ಮನೆಯಲ್ಲೇ ಆ ಸಮಸ್ಯೆ ನಿವಾರಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಪ್ರತಿನಿತ್ಯ 12 ಲೋಟ ನೀರು ಕುಡಿಯುವುದರಿಂದ ಕಿಡ್ನಿಸ್ಟೋನ್​​ ಸಮಸ್ಯೆ ನಿವಾರಣೆಯಾಗುತ್ತದೆ. ಗಾಢ ಬಣ್ಣದ ಹಳದಿಯ ಮೂತ್ರವಿಸರ್ಜನೆ ದೇಹದ ನಿರ್ಜಲೀಕರಣದ ಸೂಚನೆಯಾಗಿರುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಅಂಶ ಕಿಡ್ನಿ ಸ್ಟೋನ್​ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಜ್ವರ ನೆಗಡಿ, ತಲೆನೋವಿನಂತಹ ಸಮಸ್ಯೆಗೆ ನಾವು ತುಳಸಿ ಎಲೆಯನ್ನು ಮನೆಮದ್ದಾಗಿ ಬಳಸುತ್ತೇವೆ.

ತುಳಸಿ ಎಲೆಗಳಲ್ಲಿರುವ ಕಲ್ಮಶ ನಿವಾರಕ ಗುಣ ಮೂತ್ರ ಪಿಂಡದ ಕಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಅದರಸಲ್ಲಿನ ಅಸೆಟಿಕ್ ಆಮ್ಲವು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.ಆದರೆ ಅತಿಯಾದ ಸೇವನೆ ಬೇಡ. ನಿಯಮಿತ ಸೇವನೆ ಪ್ರಯೋಜನಕಾರಿ. ಎಳನೀರುಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತಾಜಾ ಎಳನೀರನ್ನು ಕುಡಿಯುವ ಅಭ್ಯಾಸ ಇರಲಿ. ಎಳನೀರು ಹೊಟ್ಟೆ ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅಜೀರ್ಣ, ವಾಂತಿ-ಬೇಧಿ ಉಂಟಾದಾಗಲೂ ಎಳನೀರನ್ನು ಸೇವಿಸುತ್ತೇವೆ.

ಕಿಡ್ನಿ ಸ್ಟೋನ್ ನೋವು ನಿವಾರಣೆಗೂ ಕೂಡಾ ಎಳನೀರು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣು ಸೇವಿಸಿಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣು ಕಲ್ಲಂಗಡಿ. ಹಾಗಾಗಿ ಕಿಡ್ನಿ ಸ್ಟೋನ್‌ನಿಂದ ಬಳಲುತ್ತಿರುವವರು ಆದಷ್ಟು ಕಲ್ಲಂಗಡಿ ಹಣ್ಣುಗಳನ್ನು ಸೇವಿಸಿ. ಮೂತ್ರಪಿಂಡದಲ್ಲಿ ಬೆಳೆದ ಕಲ್ಲುಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಈ ಎಲ್ಲಾ ಮನೆ ಮದ್ದುಗಳು ವ್ಯಕ್ತಿಯಿಂದ ವ್ಯಕ್ತಿಗೆ, ವಿಭಿನ್ನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಒಂದೇ ರೀತಿ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಯಾವುದೇ ಹೊಸ ಆಹಾರ ಪದ್ಧತಿ ಅಥವಾ ಔಷಧಿಯನ್ನು ಆರಂಭಿಸುವ ಮುನ್ನ ತಪ್ಪದೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ, ಚರ್ಚಿಸಿ ನಿಮಗೆ ಸೂಕ್ತ ಎಂದರೆ ಮುಂದುವರೆಯುವುದು ಒಳ್ಳೆಯದು.