Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ: ಅಂತಿಮ ಕಣದಲ್ಲಿ 20 ಅಭ್ಯರ್ಥಿಗಳು

 

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದ್ದು, ನಾಲ್ವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದಿದ್ದು, ಅಂತಿಮವಾಗಿ 20 ಅಭ್ಯರ್ಥಿಗಳು ಚುನಾವಣಾ  ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ, ಭಾರತೀಯ ಜನತಾ ಪಾರ್ಟಿಯ ಗೋವಿಂದ ಮಕ್ತಪ್ಪ ಕಾರಜೋಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್, ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ, ಕರುನಾಡ ಸೇವಕರ ಪಕ್ಷದ ಶಬರೀಶ್ ಆರ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ, ಪಕ್ಷೇತರ ಅಭ್ಯರ್ಥಿಗಳಾದ ಅಮೃತ ರಾಜ, ಗಣೇಶ್, ತುಳಸಿ ಹೆಚ್, ಎಂ.ಪಿ.ದಾರಕೇಶ್ವರಯ್ಯ, ಕೆ.ನರಸಿಂಹಮೂರ್ತಿ, ನಾಗರಾಜಪ್ಪ, ಭೂತರಾಜ ವಿ.ಎಸ್, ಮಂಜುನಾಥ ಸ್ವಾಮಿ ಟಿ, ರಘುಕುಮಾರ್ ಎಸ್, ಬಿ.ವೆಂಕಟೇಶ್, ಶ್ರೀನಿವಾಸ ಎಸ್.ಹೆಚ್, ಸುಧಾಕರ ಆರ್ ಅವರು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಮೂರ್ತಿ, ಆರ್.ದಾಸಪ್ಪ, ದೇವರಾಜ ಟಿ ಹಾಗೂ ಕೆ.ಶಿವಲಿಂಗಪ್ಪ ಈ ನಾಲ್ವರೂ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದು, ಚುನಾವಣೆಯಿಂದ ಹಿಂದೆ ಸರಿದರು.